ಭಾರತಕ್ಕೆ ಬರುತ್ತಿರುವ ರಷ್ಯ ತೈಲ ಪ್ರಮಾಣದಲ್ಲಿ ಗಣನೀಯ ಏರಿಕೆ- ಫೈನಾನ್ಶಿಯಲ್ ಟೈಮ್ಸ್ ವರದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಾರ್ಚ್ ತಿಂಗಳಲ್ಲಿ ಭಾರತವು ರಷ್ಯದಿಂದ ಖರೀದಿಸಿರುವ ಕಚ್ಚಾತೈಲವು ಗಣನೀಯ ಏರಿಕೆ ಪ್ರಮಾಣದ್ದು ಎಂದು ‘ದ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.

ಮಾರ್ಚ್ ತಿಂಗಳಲ್ಲಿ ರಷ್ಯವು ಭಾರತಕ್ಕೆ ದಿನಕ್ಕೆ ಸರಾಸರಿ 3,60,000 ಬ್ಯಾರೆಲ್ ಅನ್ನು ಈವರೆಗೆ ರಫ್ತು ಮಾಡಿದೆ. ಇದು 2021ರ ಇದೇ ಅವಧಿಯ ವಹಿವಾಟಿಗೆ ಹೋಲಿಸಿದರೆ ನಾಲ್ಕುಪಟ್ಟು ಹೆಚ್ಚು ಎಂದು ವರದಿ ಹೇಳಿದೆ. ಮಾರ್ಚ್ ತಿಂಗಳು ಕೊನೆಗೊಳ್ಳುವುದಕ್ಕೆ ಇನ್ನೂ ಸಮಯವಿದೆ. ಆದರೆ ಅಂದಾಜಿನ ಪ್ರಕಾರ ಭಾರತವು ಈ ತಿಂಗಳಲ್ಲಿ ರಷ್ಯದಿಂದ ಕೊಂಡುಕೊಳ್ಳಲಿರುವ ತೈಲ ಪ್ರಮಾಣ ದಿನಕ್ಕೆ 2,03,000 ಬ್ಯಾರೆಲ್ ಆಗಿರಲಿದೆ ಎಂಬುದು ವರದಿ ನೀಡುತ್ತಿರುವ ಲೆಕ್ಕ.

ಯುರೋಪಿಯನ್ ಮಾರುಕಟ್ಟೆಯಲ್ಲಿರುವ ನಿರ್ಬಂಧಕ್ಕೆ ಪ್ರತಿಯಾಗಿ ರಷ್ಯ ಭಾರತದಲ್ಲಿ ಮಾರುಕಟ್ಟೆ ಕಂಡುಕೊಂಡಂತಾಗಿದೆ. ಈ ಹಿಂದಿನ ಬೆಲೆಯಲ್ಲಿ ರಷ್ಯದಿಂದ ತೈಲ ಖರೀದಿಸಿ ಅದನ್ನು ನೌಕಾಸಾಗಣೆ ವೆಚ್ಚವೂ ಸೇರಿದಾಗ ಭಾರತಕ್ಕೆ ತುಟ್ಟಿಯಾಗುತ್ತಿತ್ತು. ಈಗ ರಷ್ಯವು ದರ ತಗ್ಗಿಸಿರುವುದರಿಂದ ಭಾರತಕ್ಕೆ ಸಹಕಾರಿ.

ತನ್ನ ಪೆಟ್ರೊಲಿಯಂ ಅಗತ್ಯಕ್ಕೆ ಆಮದಿನ ಮೇಲೆಯೇ ನಿರ್ಭರವಾಗಿರುವ ಭಾರತಕ್ಕೆ ಈ ನಿಟ್ಟಿನಲ್ಲಾಗುವ ವೆಚ್ಚ ಮತ್ತು ದರ ಬದಲಾವಣೆಗಳು ಹಣದುಬ್ಬರ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಂದೇ ಪಾಶ್ಚಾತ್ಯ ರಾಷ್ಟ್ರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಭಾರತ ರಷ್ಯದೊಂದಿಗಿನ ತನ್ನ ವ್ಯವಹಾರವನ್ನು ಮುಂದುವರಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!