ಶಾಕಿನಿ ಡಾಕಿನಿ ಟೀಸರ್: ನಿವೇದಾ ಥಾಮಸ್, ರೆಜಿನಾ ಕಾಂಬಿನೇಷನ್‌ ಸೂಪರ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುರೇಶ್ ಪ್ರೊಡಕ್ಷನ್ಸ್, ಗುರು ಫಿಲ್ಮ್ಸ್ ಮತ್ತು ಕ್ರಾಸ್ ಪಿಕ್ಚರ್ಸ್ ಜಂಟಿ ನಿರ್ಮಾಣದಲ್ಲಿ ಸುಧೀರ್ ವರ್ಮಾ ನಿರ್ದೇಶನದ ನಿವೇದಾ ಥಾಮಸ್ ಮತ್ತು ರೆಜಿನಾ ಕಸ್ಸಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಶಾಕಿನಿ ಡಾಕಿನಿ. ಈ ಚಿತ್ರವು ದಕ್ಷಿಣ ಕೊರಿಯಾದ ಆಕ್ಷನ್ ಹಾಸ್ಯ ಚಲನಚಿತ್ರ ʻಮಿಡ್‌ನೈಟ್ ರನ್ನರ್ಸ್‌ʼನ ರೀಮೇಕ್ ಆಗಿದೆ. ಈ ಸಿನಿಮಾದ ಟೀಸ್‌ ಬಿಡುಗಡೆಯಾಗಿದ್ದು, ಸಖತ್‌ ಮನರಂಜನೆಯಾಗಿದೆ.

ಈ ಟೀಸರ್ ನಲ್ಲಿ ನಿವೇದಾ ಅವರನ್ನು ಫುಡ್‌ ಲವರ್‌ ಆಗಿ ತೋರಿಸಲಾಗಿದ್ದು, ರೆಜಿನಾ ಅವರನ್ನು ಸದಾ ಹೈಜೆನಿಕ್‌ ಆಗಿ ಇರುವ ಹುಡುಗಿಯಾಗಿ ತೋರಿಸಲಾಗಿದೆ. ತರಬೇತಿಗಾಗಿ ಪೊಲೀಸ್ ಅಕಾಡೆಮಿಗೆ ಬಂದಾಗ ಅವರು ಎದುರಿಸುವ ಸನ್ನಿವೇಶಗಳೇನು, ಅವರ ನಡುವೆ ಸಂಬಂಧ ಹೇಗಿರುತ್ತದೆ ಎಂದು ಟೀಸರ್ ನೋಡಿದರೆ ಇದೊಂದು ಕಾಮಿಡಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನಿಸುತ್ತಿದೆ. ಕೊರಿಯನ್ ಸಿನಿಮಾ ರಿಮೇಕ್ ಆಗುತ್ತಿದ್ದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆಯಂತೆ.

ಸದ್ಯ ಕೆರಿಯರ್ ನಲ್ಲಿ ಮಂದಗತಿಯಲ್ಲಿರುವ ರೆಜಿನಾ ಹಾಗೂ ನಿವೇದಾ ಥಾಮಸ್‌ಗೆ ಈ ಸಿನಿಮಾ ಪ್ಲಸ್ ಆಗಲಿದೆ ಎಂದು ಭಾವಿಸಬಹುದು. ಈ ಶಾಕಿನಿ ಡಾಕಿನಿ ಚಿತ್ರ ಸೆಪ್ಟೆಂಬರ್ 16 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!