ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಏಪ್ರಿಲ್ 23 ರವರೆಗೆ ನ್ಯಾಯಾಂಗ ಕಸ್ಟಡಿಗೆ ವಿಧಿಸಲು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಆದೇಶಿಸಿದೆ.
ಎನ್ಐಎ ಬಂಧನದ ಅವಧಿ ಇಂದು ಕೊನೆಗೊಂಡಿದ್ದರಿಂದ ವಾಝೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆದರೆ ಏಜೆನ್ಸಿಯು ಆತನನ್ನು ಮತ್ತಷ್ಟು ಕಸ್ಟಡಿಗೆ ಪಡೆಯಲಿಚ್ಚಿಸಲಿಲ್ಲ ಮತ್ತು ಆತನನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಬಹುದೆಂದು ಮನವಿ ಮಾಡಿದರು.
ಮಾರ್ಚ್ 13 ರಂದು ಬಂಧಿಸಲ್ಪಟ್ಟ ವಾಝೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯಿದೆಯಡಿ, ಏಜೆನ್ಸಿಯು 30 ದಿನಗಳವರೆಗೆ ಆರೋಪಿಯನ್ನು ವಶಕ್ಕೆ ಪಡೆಯಬಹುದು, ಇಲ್ಲದಿದ್ದರೆ ಅದನ್ನು ಗರಿಷ್ಠ 14 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ.ಬಂಧನವಾದಾಗಿನಿಂದ, ವಾಝೆ ಎನ್ಐಎ ಬಂಧನದಲ್ಲಿದ್ದಾನೆ.