ಕಣ್ಣೀರಿಡುತ್ತಲೇ ಕುಂಭಮೇಳದಿಂದ ಹೊರಬಂದ ಸಾಧ್ವಿ ಹರ್ಷ ರಿಚಾರಿಯಾ: ಕಾರಣವೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮಹಾಕುಂಭ 2025 ರಲ್ಲಿ ವೈರಲ್ ಸಾಧ್ವಿ ಹರ್ಷ ರಿಚಾರಿಯಾ ಅಚಾನಕ್ ಕುಂಭಮೇಳವನ್ನು ಅರ್ಧದಲ್ಲಿಯೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.

ಭಾರತದ ಐತಿಹಾಸಿಕ ಕುಂಭ ಮೇಳದ ಧಾರ್ಮಿಕ ವಾತಾವರಣದಲ್ಲಿ ಟ್ರೋಲ್‌ಗಳ ನೆಗೆಟಿವ್ ಕಾಮೆಂಟ್‌ಗಳು ನನಗೆ ಭಾರೀ ಇರಿಸು-ಮುರಿಸು ಉಂಟುಮಾಡಿವೆ.

ಸಾಮಾಜಿಕ ಜಾಲತಾಣ ಹರ್ಷಾ ರಿಚಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅಳುತ್ತಾ, ನಾನು ಸನಾತನ ಧರ್ಮ ತಿಳಿದುಕೊಳ್ಳಲು ಮತ್ತು ಸನಾತನ ಸಂಸ್ಕೃತಿಯ ಜೊತೆ ಸೇರಲು ಕುಂಭ ಮೇಳಕ್ಕೆ ಬಂದಿದ್ದೆ. ಆದರೆ ಟ್ರೋಲ್‌ಗಳ ದ್ವೇಷ ಮತ್ತು ಟೀಕೆಗಳಿಂದಾಗಿ ಇಲ್ಲಿಂದ ಹಿಂತಿರುಗಬೇಕಾಗಿದೆ ಎಂದಿದ್ದಾರೆ.

ವೈರಲ್ ಸಾಧ್ವಿ ಹರ್ಷ ರಿಚಾರಿಯಾ ತಮ್ಮ ವಿಡಿಯೋದಲ್ಲಿ, ‘ನಾಚಿಕೆ ಆಗಬೇಕು ಆ ಜನಕ್ಕೆ, ನಾನು ಇಲ್ಲಿ ಮಹಾಕುಂಭದಲ್ಲಿ ಇರೋಕೆ ಬಿಡಲಿಲ್ಲ. ಈ ಕುಂಭಮೇಳ ನಮ್ಮ ಜೀವನದಲ್ಲಿ ಒಮ್ಮೆ ಬರುತ್ತೆ, ನೀವು ಅದನ್ನ ನನ್ನಿಂದ ಕಸಿದುಕೊಂಡಿದ್ದೀರಿ. ಈಗ ನಾನು ಏನೋ ದೊಡ್ಡ ತಪ್ಪು ಮಾಡಿದಂಗೆ ಅನಿಸುತ್ತಿದೆ. ನನ್ನದು ಯಾವ ತಪ್ಪೂ ಇಲ್ಲದಿದ್ದರೂ ನನ್ನ ಮೇಲೆ ಟೀಕೆ ಮಾಡ್ತಿದ್ದಾರೆ. ಇನ್ನು ಇಲ್ಲಿ ನಿಲ್ಲೋಕೆ ಆಗಲ್ಲ’ ಎಂದಿದ್ದಾರೆ.

ಮಹಾಕುಂಭಮೇಳ ಆರಂಭದಿಂದಲೂ ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದ್ದಾರೆ. ವೈರಲ್ ವಿಡಿಯೋದಲ್ಲಿ ಹರ್ಷ ರಿಚಾರಿಯಾ ಸಾಧ್ವಿ ರೂಪದಲ್ಲಿದ್ದಾರೆ. ಆಗ, ಮಹಿಳಾ ವರದಿಗಾರ್ತಿಯೊಬ್ಬರು ಇಷ್ಟು ನೀವು ಸುಂದರಿಯಾಗಿದ್ದರೂ ಏಕೆ ಸಾಧ್ವಿ ಆಗಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ಹರ್ಷಾ ರಿಚಾರಿಯಾ, ಧರ್ಮದ ಜೊತೆ ಇದ್ದಾಗ ನೆಮ್ಮದಿ ಸಿಗುತ್ತದೆ. ನಾನೀಗ 30 ವರ್ಷದವಳು, ಕಳೆದ 2 ವರ್ಷದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದೇನೆ’ ಎಂದಿದ್ದರು. ಈ ವಿಡಿಯೋ ವೈರಲ್ ಆದ ನಂತರ ಟ್ರೋಲ್‌ರ್‌ಗಳು ಸಾಧ್ವಿ ಹರ್ಷಾ ಅವರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಹರ್ಷ ರಿಚಾರಿಯಾ ಯಾರು?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಹರ್ಷ ರಿಚಾರಿಯಾ, ಮಹಾಕುಂಭದಲ್ಲಿ ತಮ್ಮ ಸೌಂದರ್ಯ ಮತ್ತು ಸಾಧ್ವಿ ರೂಪದಿಂದ ಗುರುತಿಸಿಕೊಂಡಿದ್ದಾರೆ. ಸಾಧ್ವಿಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಹರ್ಷಾ ರಿಚಾರಿಯಾ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ 1.1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಹಿಂದೆ ಹರ್ಷಾ ನಿರೂಪಕಿಯಾಗಿಯೂ ಟಿವಿ ಚಾನೆಲ್‌ಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಮಹಾಕುಂಭಕ್ಕೆ ಸಾಧ್ವಿ ರೂಪದಲ್ಲಿ ಬಂದಿದ್ದರು. ಆದರೆ, ಈಗ ಅವರ ಸಾಧ್ವಿಯ ಯಾನ ವಿವಾದದ ಸ್ವರೂಪ ಪಡೆದುಕೊಂಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!