spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೇಫ್ ಚಿಕ್ಕಮಗಳೂರು ಪ್ರಾಜೆಕ್ಟ್: ಜಿಲ್ಲೆಯ ವಿವಿಧೆಡೆ ಸಿಸಿ ಕ್ಯಾಮೆರಾ ಕಣ್ಗಾವಲು

- Advertisement -Nitte

ಹೊಸದಿಗಂತ ವರದಿ, ಚಿಕ್ಕಮಗಳೂರು:

ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸೇಫ್ ಚಿಕ್ಕಮಗಳೂರು ಪ್ರಾಜೆಕ್ಟ್ ಆರಂಭಿಸಲಾಗಿದ್ದು, ಈ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಒಟ್ಟು ೨೬೩ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಕುಂದಾಪುರದ ನೈಸ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಹಯೋಗೊಂದಿಗೆ ಈ ಯೋಜನೆ ಆರಂಭಿಸಲಾಗಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳ ನೆರವು ಪಡೆದು ದೇವಸ್ಥಾನಗಳು, ಇನ್ನಿತರೆ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳು, ಬರ್‌ಗ್ಲರ್ ಅಲರಾಂಗಳನ್ನು ಅಳವಡಿಸಲಾಗುತ್ತಿದೆ ಎಂದುತಿಳಿಸಿದ್ದಾರೆ.
ಸಭೆನಡೆಸಿ ಮಾಹಿತಿ
ಈ ಸಂಬಂಧ ಈಗಾಗಲೇ ಚಿಕ್ಕಮಗಳೂರು ಹಾಗೂ ಮೂಡಿಗೆರೆಗಳಲ್ಲಿ ಸಭೆಗಳನ್ನು ನಡೆಸಿ ಹಣಕಾಸು ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ಯೋಜನೆಯಡಿ ಅಳವಡಿಸಲಾಗುವ ಸಿಸಿ ಟಿವಿಗಳನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯಿಂದ ವೀಕ್ಷಣೆ ಮಾಡಿಸಿ ಅಪರಾಧ ತಡೆ ಬಗ್ಗೆ ಸೂಕ್ತ ಮಾಹಿತಿ, ಸಲಹೆಗಳನ್ನು ಕೊಡಿಸಿ ಅಪರಾಧ, ಅವಘಡಗಳನ್ನು ತಪ್ಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
೪೮ ಸ್ಥಳಗಳಲ್ಲಿ ಕ್ಯಾಮೆರಾ
ಈ ಯೋಜನೆಯಡಿ ಈಗಾಗಲೆ ಜಿಲ್ಲೆಯ ೪೮ ಸ್ಥಳಗಳಲ್ಲಿ ೨೬೩ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಪೈಕಿ ೪೦ ಕ್ಯಾಮೆರಾಗಳನ್ನು ಚಿಕ್ಕಮಗಳೂರು ನಗರದ ವಿವಿಧೆಡೆ ಅಳವಡಿಸಲಾಗಿದ್ದು, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇದಕ್ಕೆ ಆರ್ಥಿಕ ನೆರವು ನೀಡಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕಡೂರು ಪಟ್ಟಣದ ದೇವಸ್ಥಾನ ಇನ್ನಿತರೆ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಇದಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ ಎಂದಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ
ಈ ಎಲ್ಲಾ ಕ್ಯಾಮೆರಾಗಳು ಉನ್ನತ ತಂತ್ರಜ್ಞಾನವನ್ನು ಹೊಂದಿವೆ. ತನ್ನಿಂತಾನೆ ಈ ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್‌ಗಳನ್ನೂ ಪತ್ತೆ ಹಚ್ಚುತ್ತವೆ. ಮುಖ ಚಹರೆಯನ್ನು ಪತ್ತೆ ಹಚ್ಚುತ್ತವೆ. ರಾತ್ರಿವೇಳೆ ಸ್ಪಷ್ಟವಾಗಿ ದೃಶ್ಯಗಳನ್ನು ಸೆರೆ ಹಿಡಿಯುವ ಹೈ ರೆಸುಲೇಷನ್ ಕ್ಯಾಮೆರಾಗಳು ಇವಾಗಿವೆ ಎಂದು ತಿಳಿಸಿದ್ದಾರೆ.
ಬರ್‌ಗ್ಲರ್ ಕ್ಯಾಮೆರಾ ಅಳವಡಿಕೆ
ಈ ಯೋಜನೆಗೆ ಸ್ಪಂದಿಸಿರುವ ಕಡೂರಿನ ಬಳ್ಳೇಕೆರೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಈ ಹಿಂದೆ ಅಳವಡಿಸಿದ್ದ ೨೨ ಸಿಸಿ ಕ್ಯಾಮೆರಾಗಳ ಜೊತೆಗೆ ಹೆಚ್ಚುವರಿಯಾಗಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಬರ್‌ಗ್ಲರ್ ಅಲರಾಂ ಅಳವಡಿಸಲಾಗಿದೆ ಎಂದು ಕಡೂರು ಠಾಣಾಧಿಕಾರಿ ರಮ್ಯ ತಿಳಿಸಿದ್ದಾರೆ.
ಈ ರೀತಿ ಬರ್‌ಗ್ಲರ್ ಅಲಾರಾಂಗಳನ್ನು ದೇವಸ್ಥಾನಗಳಷ್ಟೇ ಅಲ್ಲದೆ ಮನೆಗಳು, ಜ್ಯುವೆಲರಿ ಶಾಪ್ ಇನ್ನಿತರೆ ಕಡೆಗಳಲ್ಲಿ ಅಳವಡಿಸುವುದರಿಂದ ಕಳವು ಪ್ರಕರಣಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ದೇವಸ್ಥಾನದ ಟ್ರಸ್ಟಿಗಳು ಮಾತನಾಡಿ ಮೊದಲ ಬಾರಿಗೆ ಬಳ್ಳೇಕರೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ೨೨ ಸಿಸಿ ಕ್ಯಮೆರಾಗಳನ್ನು ಅಳವಡಿಸಲಾಗಿತ್ತು. ಇದರ ಜೊತೆಗೆ ಸಬ್ ಇನ್ಸ್‌ಪೆಕ್ಟರ್ ರಮ್ಯ ಅವರ ಸಲಹೆ ಮೇರೆಗೆ ಬರ್‌ಗ್ಲರ್ ಅಲರಾಂಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನಗದ ಬಾಗಿಲು ಮುಚ್ಚಿ ಹೋಗುವಾಗ ಅಲರಾಂ ಆನ್ ಮಾಡಿಟ್ಟರೆ ನಂತರ ಯಾರಾದರೂ ದೇವಸ್ಥಾನದ ಬಾಗಿಲು ಮುಟ್ಟಿದರೂ ಅಲಾರಾಂ ಸದ್ದು ಮಾಡಲಾರಂಭಿಸುತ್ತದೆ. ಇದರ ಶಬ್ಧ ೨೦೦ ರಿಂದ ೩೦೦ ಮೀಟರ್ ವರೆಗೆ ಕೇಳಿಬರುತ್ತದೆ. ಅಲರಾಂ ಸದ್ದು ಮಾಡುವಾಗ ಮೊಬೈಲ್‌ಗಳಿಗೆ ವಾಯ್ಸ್ ಮೆಸೇಜ್ ಸಹ ಬರುತದೆ ಇದರಿಂದ ಕೂಡಲೇ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss