ಒಬ್ಬರೇ ಹೋಗುವಾಗ, ಕ್ಯಾಬ್‌ನಲ್ಲಿ ಒಬ್ಬರೇ ಇದ್ದಾಗ ಮಹಿಳೆಯರ ಸುರಕ್ಷತೆ ಹೇಗೆ? ಇಲ್ಲಿದೆ ಕೆಲವು ಸಲಹೆಗಳು..

ಕ್ಯಾಬ್‌ನಲ್ಲಿ ಒಬ್ಬರೇ ಓಡಾಡುವಾಗ ಅಥವಾ ಡ್ರೈವರ್ ಬೇರೆ ಎಲ್ಲಿಗಾದರೂ ಕರೆದುಕೊಂಡು ಹೋಗುತ್ತಿದ್ದಾರೆ ಎನಿಸಿದಾಗ, ಮನೆಯಲ್ಲಿ ಒಬ್ಬರೇ ಇದ್ದಾಗ ಯಾರಾದರು ನಿಮ್ಮನ್ನು ಅಟ್ಯಾಕ್ ಮಾಡುತ್ತಿದ್ದಾರೆ ಎನಿಸಿದಾಗ ಏನು ಮಾಡಬೇಕು ಇಲ್ಲಿದೆ ಕೆಲಸ ಸಲಹೆಗಳು..

  • ಹಗಲಿನಲ್ಲಿ ನಿಮ್ಮ ಕಾರ್ ಅಥವಾ ಸ್ಕೂಟಿಯನ್ನು ಲೈಟ್ ಕಂಬದ ಬಳಿ ನಿಲ್ಲಿಸಿ, ರಾತ್ರಿ ಗಾಡಿ ತೆಗೆದರೂ ತೊಂದರೆ ಇರುವುದಿಲ್ಲ.
  • ಲಿಫ್ಟ್‌ನಲ್ಲಿ ಅಪರಿಚಿತ ವ್ಯಕ್ತಿ ಜೊತೆ ಸಿಲುಕಿ ಭಯದ ಅನುಭವ ಆದರೆ ಲಿಫ್ಟ್‌ನ ಎಲ್ಲಾ ಬಟನ್‌ಗಳನ್ನು ಒತ್ತಿ. ಪ್ರತಿ ಫ್ಲೋರ್‌ನಲ್ಲಿ ಲಿಫ್ಟ್ ನಿಲ್ಲುವ ಭಯದಿಂದ ಯಾರೂ ಏನು ಮಾಡುವುದಿಲ್ಲ.
  • ಮನೆಯಲ್ಲಿ ಒಬ್ಬರೇ ಇದ್ದಾಗ ಹಲವು ಮಂದಿ ದಾಳಿ ಮಾಡಿದರೆ ಸೀದ ಅಡುಗೆ ಮನೆಗೆ ಹೋಗಿ, ಅಲ್ಲಿ ನಿಮಗೆ ಖಾರದಪುಡಿ ಸಿಗುತ್ತದೆ. ಚಾಕು ಸಿಗುತ್ತದೆ. ಸಿಕ್ಕ ಪಾತ್ರೆಗಳನ್ನು ಅವರ ಮೇಲೆ ಎಸೆದು ಕೂಗಾಡಿ ಬೇರೆಯವರ ಗಮನ ಬರುತ್ತದೆ.
  • ಯಾವುದೇ ಸಂದರ್ಭದಲ್ಲಿ ಕೂಗಾಡಿ, ಕಳ್ಳರಿಗೆ ಶಬ್ದ ಕಂಡರೆ ಭಯ.
  • ಹೊಟೇಲ್ ರೂಂನಲ್ಲಿ ಒಬ್ಬರೇ ಇದ್ದರೆ, ರೂಂ ಬಾಗಿಲು ತೆಗೆದಾಗ ಒಬ್ಬರೇ ಇರುವಂತೆ ನೋಡಿಕೊಳ್ಳಿ. ಬೇರೆಯವರು ನಿಮ್ಮ ರೂಂ ನೋಡುವುದು ಬೇಡ.
  • ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಗೆ ಹೋಗುತ್ತಿದ್ದೀರ, ಯಾವ ಹೊಟೇಲ್‌ನಲ್ಲಿ ಇದ್ದೀರ ಎಂದೆಲ್ಲಾ ಹೇಳಿಕೊಳ್ಳಬೇಡಿ.
  • ಆಟೋ ಅಥವಾ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಡ್ರೈವರ್‌ಗೆ ಕೇಳಿಸುವಂತೆ ಮನೆಯವರಿಗೆ ಕರೆ ಮಾಡಿ, ಇಂಥ ಗಾಡಿಯಲ್ಲಿ ಬರುತ್ತಿದ್ದೇನೆ, ಡ್ರೈವರ್ ಹೆಸರು ಕೂಡ ಹೇಳಿ.
  • ಲೈವ್ ಲೊಕೇಶನ್ ಮನೆಯವರಿಗೆ ಕಳಿಸಿರಿ. ಡ್ರೈವರ್ ಬೇರೆ ಲೊಕೇಶನ್ ಹೋಗುತ್ತಿದ್ದಾರೆ ಎನಿಸಿದರೆ ಅವರನ್ನು ನಿಲ್ಲಿಸಲು ನಿಮ್ಮ ಪರ್ಸ್, ದುಪ್ಪಟ್ಟಾ ಅಥವಾ ಅವರ ಕಾಲರ್‌ನ್ನು ಹಿಡಿದು ಎಳೆಯಿರಿ ಗಾಡಿ ನಿಂತ ತಕ್ಷಣ ಓಡಿ ಹೋಗಿ.
  • ಯಾವುದೇ ಹೊಸಾ ಜಾಗದಲ್ಲಿ ಸಿಸಿ ಕ್ಯಾಮೆರಾ, ಹಿಡನ್ ಕ್ಯಾಮೆರಾಗಳ ಬಗ್ಗೆ ಗಮನ ಇಟ್ಟು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!