ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುಸಿದು ಬಿದ್ದರೂ ಪ್ರಯಾಣಿಕರನ್ನು ಸೇಫಾಗಿಸಿದ `ಸೇಫ್ ವೇ’ ಬಸ್ ಚಾಲಕ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ,ಮಂಗಳೂರು:

ಪ್ರಯಾಣಿಕರಿಂದ ತುಂಬಿದ್ದ ಬಸ್‌ನ್ನು ಚಲಾಯಿಸುತ್ತಿದ್ದ ಬಸ್ ಚಾಲಕ ಹಠಾತ್ ಕುಸಿದು ಬಿದ್ದರೂ, ಬ್ರೇಕ್ ತುಳಿದು ಬಸ್‌ನ್ನು ನಿಲ್ಲಿಸುವ ಮೂಲಕ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸಿದ ಘಟನೆ ಗುರುವಾರ ನಗರದ ಅಡ್ಯಾರ್‌ನಲ್ಲಿ ನಡೆದಿದೆ.
ಪ್ರಯಾಣಿಕರನ್ನು ಹೊತ್ತ `ಸೇಫ್ ವೇ ಟ್ರಾವೆಲ್ಸ್’ ಹೆಸರಿನ ಖಾಸಗಿ ಬಸ್ ಪುತ್ತೂರಿನಿಂದ ಮಂಗಳೂರು ಕಡೆಗೆ ಹೊರಟಿತ್ತು. ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕ ಸಂತೋಷ್ ಸ್ಟಿಯರಿಂಗ್ ಮೇಲೆ ಕುಸಿದಿದ್ದಾರೆ. ಆದರೂ ಬ್ರೇಕ್ ತುಳಿದು ಬಸ್‌ನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರು ಏನು ಅವಘಡ ಸಂಭವಿಸುತ್ತದೆಯೋ ಎಂದು ಆತಂಕದಿಂದಿರುವಾಗಲೇ ಚಾಲಕ ಸಮಯಪ್ರಜ್ಞೆ ಮೆರೆದು ಭಾರೀ ಅನಾಹುತವೊಂದನನ್ನು ತಪ್ಪಿಸಿದ್ದಾರೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ಕುಸಿದು ಬಿದ್ದ ಬಸ್ ಚಾಲಕನನ್ನು ತಕ್ಷಣವೇ ಪ್ರಯಾಣಿಕರು ಉಪಚರಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲೋ ಬಿಪಿಯ ಕಾರಣ ಚಾಲಕ ಕುಸಿದು ಬಿದ್ದಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss