ವಿವಾದಾತ್ಮಕ ಹೇಳಿಕೆಗೆ ಸಾಯಿ ಪಲ್ಲವಿ ಸ್ಪಷ್ಟನೆ, ವಿಡಿಯೋದಲ್ಲೇನಿದೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿರಾಟಪರ್ವಂ ಸಿನಿಮಾ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್‌ ಹಾಗೂ ಗೋಹತ್ಯೆ ಹೋಲಿಕೆ ಕುರಿತು ನಟಿ ಸಾಯಿ ಪಲ್ಲವಿ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದತ್ತು. ಇದೀಗ ಆ ವಿಚಾರದ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದ್ದು, ವಿವರಣೆ ನೀಡಿದ್ದಾರೆ.

ʻನಾನು ಆ ಸಂದರ್ಶನದಲ್ಲಿ ಹಿಂಸೆ ಬಗ್ಗೆ ಮಾತನಾಡಿದ್ದೇನೆ. ನನಗೆ ಹಿಂಸೆ ಅಂದರೆ ಆಗುವುದಿಲ್ಲ, ಅದನ್ನು ಸಂಪೂರ್ಣವಾಗಿ ವಿರೋಧ ಮಾಡುವ ಅದರ ಬಗ್ಗೆ ಮಾತ್ರ ಮಾತನಾಡಿದ್ದೇನೆ. ನನ್ನ ಮಾತುಗಳನ್ನು ಕ್ಲಿಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸಂದರ್ಶನವನ್ನು ಪೂರ್ತಿಯಾಗಿ ನೋಡಿದರೆ ನಾನು ಯಾಕೆ ಆ ಕಾಮೆಂಟ್ ಮಾಡಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

ಕೇವಲ ಕ್ಲಿಪ್ಪಿಂಗ್ ನೋಡಿ ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ. ನಾನು ಎಂಬಿಬಿಎಸ್‌ ಓದಿದ್ದೇನೆ. ನನಗೆ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಮತ್ತೊಬ್ಬರ ಪ್ರಾಣವನ್ನು ತೆಗೆದುಕೊಳ್ಳುವ ಹಕ್ಕು ನಮಗಿಲ್ಲ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನನ್ನ ಮಾತುಗಳನ್ನು ಇಷ್ಟ ಬಂದಂತೆ ಬೇರೆ ರೀತಿಯಲ್ಲಿ ಅರ್ಥಿಸಿರುವುದು ನಿಜಕ್ಕೂ ಬೇಸರವಾಗಿದೆʼ.  ಈ ವಿಚಾರದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಎಂದಿದಾರೆ.

ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಅಭಿಮಾಣಿಗಳು ಸಾಯಿ ಪಲ್ಲವಿಗೆ ಬೆಂಬಲ ನೀಡಿದ್ರೆ, ಇನ್ನೂ ಕೆಲಚರು ಅದೇ ದಾಟಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಯಿ ಪಲ್ಲವಿ ನೀಡಿರುವ ಸ್ಪಷ್ಟನೆಯಿಂದ ಈ ವಿವಾದಕ್ಕೆ ಫುಲ್ ಸ್ಟಾಪ್ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!