ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತು ಸಾಯಿ ಪಲ್ಲವಿ ವಿವಾದಾತ್ಮಕ ಹೇಳಿಕೆ: ವ್ಯಾಪಕ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿರಾಟಪರ್ವಂ ಸಿನಿಮಾ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಗೋ ಹತ್ಯೆಗೆ ಸಂಬಂಧ ಕಲ್ಪಿಸಿ ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗಿದ್ದಾರೆ. ಜೂನ್‌ 17 ರಂದು ವಿರಾಟಪರ್ವಂ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸರಣಿ ಪ್ರಚಾರ ಮತ್ತು ಸಂದರ್ಶನಗಳಲ್ಲಿ ನಿರತವಾಗಿದೆ.

ಈ ವೇಳೆ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ ʼನನಗೆ ಹಿಂಸೆ ಹಿಡಿಸಲ್ಲ, ನಮ್ಮ ಕುಟುಂಬದಲ್ಲಿ ಎಡಪಂಥೀಯ, ಬಲಪಂಥೀಯ ಎಂಬ ವಾದ ಇಲ್ಲ ನಾನು ತಟಸ್ಥವಾಗಿ ಕಾಣುವ ಕುಟುಂಬದಲ್ಲಿ ಬೆಳೆದು ಬಂದಿದ್ದೇನೆ. ನಾವು ಒಳ್ಳೆಯವರಾಗಿರಬೇಕು ಮತ್ತು ಯಾರಿಗೂ ನೋವುಂಟು ಮಾಡಬಾರದುʼ ಎಂಬ ತತ್ವವನ್ನು ಅನುಸರಿಸಿದ್ದೇನೆ.

ಮುಂದುವರೆದು, ಕೆಲ ದಿನಗಳ ಹಿಂದೆ ʻಕಾಶ್ಮೀರ ಫೈಲ್ಸ್ ಚಿತ್ರ ತೆರೆಗೆ ಬಂತು. ಅದರಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಂದರು ಎಂಬುದನ್ನು ತೋರಿಸಿದ್ದಾರೆ. ಈ ವಿಚಾರವನ್ನು ನಾವು ಧಾರ್ಮಿಕ ಸಂಘರ್ಷವಾಗಿ ನೋಡುತ್ತೇವೆ. ಕೊರೊನಾ ಸಂದರ್ಭದಲ್ಲಿ ಸತ್ತ ಹಸುವನ್ನು ಎತ್ತಿನಗಾಡಿಯಲ್ಲಿ ಸಾಗಿಸಲಾಗುತ್ತಿತ್ತು ಒಬ್ಬ ಮುಸ್ಲಿಂ ವ್ಯಕ್ತಿ ಆ ಗಾಡಿಯನ್ನು ಓಡಿಸುತ್ತಿದ್ದ. ಆಗ ಅಲ್ಲಿಗೆ ಬಂದ ಕೆಲವರು ಆತನಿಗೆ ಹೊಡೆದು ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಪಂಡಿತರ ಹತ್ಯೆಗೂ, ವ್ಯಕ್ತಿಯ ಮೇಲಿನ ಹಲ್ಲೆಗೂ ವ್ಯತ್ಯಾಸ ಎಲ್ಲಿದೆʼ ಅವರೂ ಹಿಂಸೆ ಮಾಡಿದ್ದಾರೆ, ಇವರೂ ಕೂಡ ಅದೇ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದರು.

ಸಾಯಿ ಪಲ್ಲವಿ ಮಾಡಿರುವ ಈ ಕಮೆಂಟ್‌ಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆಗೂ, ಹಿಂದೂಗಳು ದೇವರು ಎಂದು ಪೂಜೆ ಮಾಡುವ ಗೋವನ್ನು ತಿನ್ನುವವರಿಗೆ ಬುದ್ದಿ ಹೇಳುವ ಎರಡೂ ಘಟನೆಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ ಅಂತಿದಾರೆ ನೆಟ್ಟಿಗರು. ಈ ವಿಚಾರವಾಗಿ ಸಾಯಿ ಪಲ್ಲವಿಯನ್ನು ಟ್ರೋಲ್‌ ಮಾಡುತ್ತಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.

ಇನ್ನೂ ಕೆಲವರು ಬಾಯ್ಕಾಟ್‌ ವಿರಾಟಪರ್ವಂ ಎಂದು ಘೋಷಣೆ ಕೂಗಿದ್ದಾರೆ. ಈ ವಿಚಾರದಲ್ಲಿ ಮೀಮ್ಸ್‌ ನೆಗೆಟಿವ್‌ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಸಾಯಿ ಪಲ್ಲವಿ ಕಮೆಂಟ್‌ಗಳ ಎಫೆಕ್ಟ್ ಈಗ ವಿರಾಟ್ ಪರ್ವಂ ಚಿತ್ರದ ಮೇಲೆ ಆಗಿದೆ. ಆದರೆ ಹರಿದಾಡುತ್ತಿರುವ ವಿಚಾರಗಳ ಕುರಿತು ನಟಿ ಇದುವರೆಗೂ ತುಟಿ ಬಿಚ್ಚಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!