spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಮಿಡಿ ಸ್ಟೋರಿ ಆಯ್ಕೆ ಮಾಡಿ ಎಡವಿದ್ರಾ ನಟ ಸೈಫ್ ಅಲಿ ಖಾನ್!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ರಾಣಿ ಮುಖರ್ಜಿ ನಟನೆಯ ಬಂಟಿ ಔರ್ ಬಬ್ಲಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ ಎನ್ನಲಾಗಿದೆ.
ಚಿತ್ರ ರಿಲೀಸ್ ಆಗಿ ವಾರವೇ ಕಳೆಯುತ್ತಿದ್ದರೂ ಇನ್ನೂ ಚಿತ್ರದ ಕಲೆಕ್ಷನ್ ಹೆಚ್ಚಾಗಿಲ್ಲ. ಈವರೆಗೂ ಈ ಸಿನಿಮಾದ ಗಳಿಕೆ ಕೇವಲ 9 ಕೋಟಿ ರೂ. ಅಷ್ಟೆ.
ವೀಕೆಂಡ್ ಮುಗಿದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಚಿತ್ರದ ಕಲೆಕ್ಷನ್ ಮಾತ್ರ ಏರಿಕೆ ಕಾಣಿತ್ತಿಲ್ಲ. ಸೋಮವಾರ ದೇಶದಾದ್ಯಂತ 1 ಕೋಟಿ ರೂ. ಮಾತ್ರ ಗಳಿಸಿತ್ತು.
ಇನ್ನು ವಿದೇಶದಲ್ಲೂ ಪ್ರದರ್ಶನ ನೀಡುತ್ತಿರುವ ಈ ಚಿತ್ರಕ್ಕೆ ಅಲ್ಲಿ 4.95 ಕೋಟಿ ರೂ ಬಂದಿದ್ದು, ಒಟ್ಟಾರೆ ಇಡೀ ಸಿನಿಮಾಗೆ ಕೇವಲ 15 ಕೋಟಿ ರೂ. ಕಲೆಕ್ಷನ್ ಪಡೆದಿದೆ.
ಈ ಚಿತ್ರದಲ್ಲಿ ರಾಣಿ ಮುಖರ್ಜಿ ಹಾಗೂ ಸೈಫ್ 12 ವರ್ಷಗಳ ನಂತರ ಒಟ್ಟಿಗೆ ತೆರೆ ಮೇಲೆ ನಟಿಸಿದ್ದಾರೆ. ಇದರಲ್ಲಿ ಕಾಮಿಡಿ ಸ್ಟೋರಿಯಾಗಿದ್ದು, ಜನರ ಮನ ಗೆಲ್ಲುವ ನಿರೀಕ್ಷೆ ಇತ್ತು.
ಸಿನಿಮಾಗೆ ವರುಣ್ ವಿ. ಶರ್ಮ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss