CINEMA| ಯುಗಾದಿ ದಿನ ಸಲಾರ್ ಅಪ್ಡೇಟ್: ಪ್ರಭಾಸ್‌ ಅಭಿಮಾನಿಗಳಿಗೆ ಹಬ್ಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಅಭಿನಯದ ಪ್ರತಿಷ್ಠಿತ ಸಿನಿಮಾ ‘ಸಲಾರ್’ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಲು ತಯಾರಾಗುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾವನ್ನು ತಮ್ಮದೇ ಬ್ರಾಂಡ್ ಆ್ಯಕ್ಷನ್ ಸಿನಿಮಾವಾಗಿ ಮಾಡುತ್ತಿರುವುದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಒಂದು ರೇಂಜ್ ನಲ್ಲಿ ಮೂಡಿವೆ.

ಈಗಾಗಲೇ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದ್ದು, ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ. ಹಾಗಾಗಿ, ಈ ಸಿನಿಮಾದಿಂದ ಯಾವುದೇ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಯುಗಾದಿ ದಿನದಂದು ಈ ಸಿನಿಮಾದಿಂದ ಒಂದು ಅಪ್‌ಡೇಟ್ ಬರಲಿದೆ ಎಂಬ ಮಾತುಗಳು ಚಿತ್ರ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಯುಗಾದಿ ದಿನದಂದೇ ಚಿತ್ರದ ಮುಂದಿನ ಶೆಡ್ಯೂಲ್ ಶೂಟಿಂಗ್ ಆರಂಭಿಸಲು ಚಿತ್ರತಂಡ ಬಯಸಿದೆಯಂತೆ.

ರಾಮೋಜಿ ಫಿಲ್ಮ್ ಸಿಟಿಯ ಅದ್ಧೂರಿ ಸೆಟ್‌ನಲ್ಲಿ ಈ ಶೆಡ್ಯೂಲ್ ನಿರ್ವಹಿಸಲು ಚಿತ್ರತಂಡ ಸಿದ್ಧವಾಗುತ್ತಿದೆ. ಈ ಚಿತ್ರೀಕರಣದಲ್ಲಿ ಪ್ರಭಾಸ್ ಜೊತೆಗೆ ಪ್ರಮುಖ ಕಾಸ್ಟಿಂಗ್ ಭಾಗವಹಿಸಲಿದ್ದಾರೆ ಎನ್ನುತ್ತವೆ ಚಿತ್ರದ ಮೂಲಗಳು. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದರೆ, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!