Sunday, April 18, 2021

Latest Posts

ನಕ್ಸಲ್​ ದಾಳಿಯಲ್ಲಿ ಸಂಬಳಕ್ಕಾಗಿ ದುಡಿಯುವವರು ಮೃತಪಟ್ಟಿದ್ದಾರೆ: ವಿವಾದಾತ್ಮಕ ಹೇಳಿಕೆ ನೀಡಿದ್ದ ಬರಹಗಾರ್ತಿ ಬಂಧನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಛತ್ತೀಸ್​ಗಢದಲ್ಲಿ ನಡೆದ ನಕ್ಸಲ್​ ದಾಳಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂ ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸಿಖಾ ಶರ್ಮಾ ಅವರನ್ನು ದಿಸ್ಪುರ್​ ಪೊಲೀಸರು ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಒಟ್ಟು 22 ಕೋಬ್ರಾ ಪೊಲೀಸರು ಹುತಾತ್ಮರಾಗಿದ್ದರು. ಇದರಲ್ಲಿ ಅಸ್ಸಾಂ ಮೂಲದವರಾದ ಇನ್ಸ್​​ಪೆಕ್ಟರ್​ ದಿಲೀಪ್​ ಕುಮಾರ್​ ಹಾಗೂ ಪೇದೆ ಬಾಬುಲ್​ ರಭಾ ವೀರ ಮರಣವನ್ನಪ್ಪಿದ್ದರು.
ಆದರೆ ಶಿಖಾ ಶರ್ಮಾ ಈ ಬಗ್ಗೆ ಸೋಮವಾರ ಫೇಸ್​ಬುಕ್​​ನಲ್ಲಿ ಕಮೆಂಟ್​ ಮಾಡಿದ್ದರು. ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಹುತಾತ್ಮರಾಗಿಲ್ಲ ಎಂದು ಹೇಳಿದ್ದರು.
ಅವರ ಈ ಫೇಸ್​​ಬುಕ್​ ಪೋಸ್ಟ್​ಗಳನ್ನ ಆಧರಿಸಿ ವಕೀಲರಾದ ಉಮಿ ದೆಕಾ ಬರುವಾ ಮತ್ತು ಕಂಗಕನಾ ಗೋಸ್ವಾಮಿ, ಶರ್ಮಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ದಿಸ್ಪುರ್​ ಪೊಲೀಸರು ಈ ಸಂಬಂಧ ಎಫ್​ಐಆರ್ ದಾಖಲಿಸಿ, 48 ವರ್ಷದ ಬರಹಗಾರ್ತಿಯನ್ನು ಬಂಧಿಸಿದ್ದು, .ಐಪಿಸಿ ಸೆಕ್ಷನ್​​ 124 ಎ ಅನ್ವಯ ದೇಶದ್ರೋಹದ ಆರೋಪದ ವಿಚಾರಣೆ ನಡೆಸುತ್ತಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss