ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಾಯುಮಾಲಿನ್ಯವುಂಟು ಮಾಡುವ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಲ್ಲಿ ಅನೇಕ ದೇಶಗಳು ನಾನಾ ಯೋಜನೆಗಳನ್ನು ಜರಿ ತರುತ್ತಿದೆ. ಇದೀಗ ನಾರ್ವೆ ದೇಶ ಇಂತಹ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಮುಂದಿನ ವರ್ಷದಿಂದಲೇ ನಾರ್ವೆಯಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಬಂದ್ ಆಗಲಿದೆ. ಅಂದ್ರೆ 2025ರಿಂದ ನಾರ್ವೆಯಲ್ಲಿ ಪೆಟ್ರೋಲ್-ಡೀಸೆಲ್ ಆಧಾರಿತ ಯಾವುದೇ ವಾಹನಗಳು ಮಾರಾಟ ನಡೆಯಲ್ಲ.
ಇನ್ನು ಈ ಯೋಜನೆಯನ್ನು ಭಾರತ 2040ರಲ್ಲಿ ಜಾರಿಗೆ ತರಲು ಯೋಚಿಸುತ್ತಿದೆ. ಇದೇ ರೀತಿಯಲ್ಲಿಯೇ ಚೀನಾ ಸಹ ಐದು ವರ್ಷಗಳ ಹಿಂದೆಯೇ ಈ ನಿರ್ಧಾರ ತೆಗೆದುಕೊಂಡಿತ್ತು. 2025ರೊಳಗೆ ಚೀನಾದಲ್ಲಿ ಸಂಪೂರ್ಣವಾಗಿ ಪೆಟ್ರೋಲ್-ಡೀಸೆಲ್ ಆಧಾರಿತ ವಾಹನಗಳ ಮಾರಾಟ ನಿಲ್ಲಿಸಲಿದೆ. 2025ರಿಂದ ನಾರ್ವೆಯಲ್ಲಿ ಯಾವುದೇ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟವಾಗಲ್ಲ. ಬೆಲ್ಜಿಯಂ 2029ಕ್ಕೆ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿದೆ.
ಜರ್ಮನಿ, ಗ್ರೀಸ್, ಐಲ್ಯಾಂಡ್, ಇಸ್ರೇಲ್, ನೆದರ್ಲಾಂಡ್, ಸ್ವೀಡನ್ ಮತ್ತು ಡೆನ್ಮಾರ್ಕ್ 2030ರಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣವಾಗಿ ನಿಲ್ಲಿಸಲಿದೆ. ಚಿಲಿ, ಚೀನಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಪೋರ್ಚುಗಲ್, ಥೈಲ್ಯಾಂಡ್, ಯುಕೆ ಮತ್ತು ಅಮೆರಿಕ 2035ರ ವೇಳೆಗೆ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಯೋಜಿಸುತ್ತಿವೆ.
ಆಸ್ಟ್ರಿಯಾ, ಕ್ರೊಯೇಷಿಯಾ, ಈಜಿಪ್ಟ್, ಎಲ್ ಸಾಲ್ವಡಾರ್, ಐರ್ಲೆಂಡ್, ಮೆಕ್ಸಿಕೊ, ನ್ಯೂಜಿಲೆಂಡ್, ಪಾಕಿಸ್ತಾನ, ಪೋಲೆಂಡ್, ಸ್ಪೇನ್ ಮತ್ತು ಟರ್ಕಿ ಸಹ 2040ರಲ್ಲಿ ಈ ಪೆಟ್ರೋಲ್-ಡೀಸೆಲ್ ಆಧಾರಿತ ಯಾವುದೇ ವಾಹನಗಳ ಮಾರಾಟದ ಮೇಲೆ ನಿಷೇಧ ಹೇರುವ ಗುರಿಯನ್ನು ಹೊಂದಿವೆ.
ಈ ಸಂಬಂಧ ಆಫ್ರಿಕಾ ಯಾವುದೇ ಯೋಜಿತ ಉದ್ದೇಶ ಹೊಂದಿಲ್ಲ. ಇತ್ತ ಕಚ್ಚಾ ತೈಲ ಉತ್ಪಾದನೆ ರಾಷ್ಟ್ರಗಳು ಈ ಕುರಿತು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ
ನಮ್ಮ ದೇಶದಲ್ಲಿ 2030, ಅಂತ ಗಡ್ಡರಿ ಸಾಹೇಬ್ರು ಹೇಳುತಿದ್ರು ಏನಾಯಿತು, ಬಂದ ಎಲ್ಲಾ ದ್ವಿಚಕ್ರ ವಾಹನಗಳು ಫೇಲ್ ರಿಪೇರ್ಗಳೇ ಆಗುತ್ತಿಲ್ಲ ಸ್ಪೇರ್ ಪಾರ್ಟ್ಸ್ , ಬ್ಯಾಟರಿ ಹೀಗೆಲ್ಲ ಸಾಬುಬು ನಮಗೆ ಯಾಕೇ ಬೇಕು ಎಲೆಕ್ಟ್ರಿಕಲ್ ವೆಹಿಕಲ್ ನಮ್ಮ ಭಾರತದಲ್ಲಿ ಸಾಧ್ಯವೇ ಇಲ್ಲ ಕಾಚಾರ ರಾಜಕೀಯ
ನಮ್ಮ ದೇಶದಲ್ಲಿ 2030, ಅಂತ ಗಡ್ಡರಿ ಸಾಹೇಬ್ರು ಹೇಳುತಿದ್ರು ಏನಾಯಿತು, ಬಂದ ಎಲ್ಲಾ ದ್ವಿಚಕ್ರ ವಾಹನಗಳು ಫೇಲ್ ರಿಪೇರ್ಗಳೇ ಆಗುತ್ತಿಲ್ಲ ಸ್ಪೇರ್ ಪಾರ್ಟ್ಸ್ , ಬ್ಯಾಟರಿ ಹೀಗೆಲ್ಲ ಸಾಬುಬು ನಮಗೆ ಯಾಕೇ ಬೇಕು ಎಲೆಕ್ಟ್ರಿಕಲ್ ವೆಹಿಕಲ್ ನಮ್ಮ ಭಾರತದಲ್ಲಿ ಸಾಧ್ಯವೇ ಇಲ್ಲ ಕಾಚಾರ ರಾಜಕೀಯ
ಇದು ಅನಿವಾರ್ಯ ಆಗಿದೆ ನಾವೆಲ್ಲ ಪೆಟ್ರೋಲ್ ಡೀಸೆಲ್ ಬಳಕೆ ಸ್ಥಗಿತ ಗೋಳಿಸಿವ ಕಾಲ ಬಂದಿದೆ ಇದಕ್ಕೆ ಪರಿಹಾರವಾಗಿ ಇವಿ ವಾಹನಗಳ ಬಳಕೆಗೆ ಬಂದಿದೆ ಇದು ಕಡಿಮೆ ಖರ್ಚಿನದ್ದು ಸರಿ