ಟೀಸರ್‌ ಮೂಲಕ ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ಸಲ್ಲು-ಕತ್ರೀನಾ: ಟೈಗರ್‌-3 ಬಿಡುಗಡೆ ಯಾವಾಗ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಸಲ್ಮಾನ್‌ ಖಾನ್‌ ಹಾಗೂ ನಟಿ ಕತ್ರೀನಾ ಕೈಫ್‌ ನಟನೆಯ ಟೈಗರ್-3‌ ಚಿತ್ರತಂಡ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ.
ಬಹುನಿರೀಕ್ಷಿತ ಟೈಗರ್‌-3 ಟೀಸರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಇದರಲ್ಲಿ ಕತ್ರೀನಾ ಹಾಗೂ ಸಲ್ಮಾನ್‌ ನ ಗ್ರ್ಯಾಂಡ್‌ ಎಂಟ್ರಿಗೆ ಸಿನಿಪ್ರಿಯರು ಫಿದಾ ಆಗಿದ್ದು, ಇದೇ ಟೀಸರ್‌ ನ ಕೊನೆಯಲ್ಲಿ ಸಿನಿಮಾ ರಿಲೀಸ್‌ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
2023ರ ಈದ್‌ ಹಬ್ಬದಂದು, ಅಂದ್ರೆ ಏಪ್ರಿಲ್‌ 21ಕ್ಕೆ ಚಿತ್ರ ತೆರೆ ಕಾಣಲಿದೆ.
ಈ ಸಿನಿಮಾಕ್ಕೆ ಮನೀಶ್‌ ಶರ್ಮಾ ಆಕ್ಷನ್‌ ಕಟ್‌ ಹೇಳಿದ್ದು, ಯಶ್‌ ರಾಜ್‌ ಫಿಲಂಸ್‌ ಬಂಡವಾಳ ಹೂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!