ಬಾಲಿವುಡ್ ಅನ್ನು ವಿರಾಟ್‌ ಕೊಹ್ಲಿಗೆ ಹೋಲಿಸಿದ ಸಲ್ಮಾನ್‌ ಖಾನ್‌: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಸದ್ಯ ಎಲ್ಲೆಡೆ ದಕ್ಷಿಣ ಭಾರತದ ಚಿತ್ರಗಳು ಕಮಾಲ್ ಮಾಡುತ್ತಿದ್ದು, ಈ ಕುರಿತು ಮಾತನಾಡಿದ ಸಲ್ಮಾನ್‌ ಖಾನ್‌ , ಬಾಲಿವುಡ್‌ ಈಗ ಫಾರ್ಮ್‌ ಕಳೆದುಕೊಂಡ ವಿರಾಟ್‌ ಕೊಹ್ಲಿ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ಸುದೀಪ್ ನಟನೆಯ ವಿಕ್ರಾಂತ್‌ ರೋಣ ಹಿಂದಿ ಅವತರಣಿಕೆ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಟ್‌ ಕೊಹ್ಲಿ ಫಾರ್ಮ್‌ ಕಳೆದುಕೊಂಡಿದ್ದಾರೆ. ಹಾಗಂತ ಅವರು ಮಾಡಿದ ದಾಖಲೆಗಳನ್ನು ಕಡೆಗಣಿಸಲು ಸಾಧ್ಯವೇ? ಅದೇ ರೀತಿ ಬಾಲಿವುಡ್‌ ಸಿನಿಮಾಗಳು ಕೂಡ ಉತ್ತಮ ಸಾಧನೆ ಮಾಡುತ್ತಿಲ್ಲ ಎಂದರು.
ಸಿನಿಮಾ ಯಶಸ್ಸಿಗೆ ಯಾವುದೇ ಸೂತ್ರಗಳಿಲ್ಲ. ಪ್ರತಿಯೊಬ್ಬರೂ ಉತ್ತಮ ಚಿತ್ರ ಬಿಡುಗಡೆ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಶೇ.೧೦೦ರಷ್ಟು ಪ್ರಯತ್ನ ಪಡುತ್ತಾರೆ. ಬಹುತೇಕ ಚಿತ್ರಗಳು ಇದರಲ್ಲಿ ವಿಫಲವಾಗುತ್ತವೆ. ಕೆಲವು ಮಾತ್ರ ಯಶಸ್ಸು ಕಾಣುತ್ತದೆ ಎಂದು ಸಲ್ಮಾನ್‌ ಖಾನ್‌ ಹೇಳಿದರು.
ಎಲ್ಲರನ್ನೂ ಸೇರಿಸಿ ಬಾಲಿವುಡ್‌ ಅನ್ನು ದಕ್ಷಿಣ ಭಾರತ ಚಿತ್ರಗಳು ಹಿಂದಿಕ್ಕಿವೆ ಎಂದು ಹೇಳುವುದು ಸರಿಯಲ್ಲ. ಈಗ ದಕ್ಷಿಣ ಭಾರತದ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಬಾಲಿವುಡ್‌ ಸಿನಿಮಾಗಳು ಕೂಡ ಲಯ ಕಂಡುಕೊಳ್ಳಬೇಕಿದೆ. ಸದ್ಯಕ್ಕೆ ನಾನು ನಷ್ಟ ಮಾಡಿಕೊಳ್ಳಲು ಪ್ರಯೋಗಕ್ಕೆ ಮುಂದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!