ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್-3 ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದ್ದು, ಸಲ್ಮಾನ್ ಪಾತ್ರದ ಲುಕ್ ಲೀಕ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಔಟ್ಫಿಟ್ ಬಗ್ಗೆ ಚರ್ಚೆ ಆಗಿದ್ದು, ಸಲ್ಮಾನ್ ಧರಿಸಿದ ಬಟ್ಟೆ ಕೆ.ಜಿ.ಎಫ್ನಲ್ಲಿ ಯಶ್ ಹಾಕಿದ ಬಟ್ಟೆ ರೀತಿ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಬಿಳಿ ಟೀಶರ್ಟ್ ಮೇಲೆ ಆರೆಂಜ್ ಜ್ಯಾಕೆಟ್ನ್ನು ಜೋಕೆ ಹಾಡಿನಲ್ಲಿ ಯಶ್ ಧರಿಸಿದ್ರು. ಅದೇ ರೀತಿ ಲುಕ್ ಕ್ಯಾರಿ ಮಾಡಿದ್ದಾರೆ ಅನ್ನೋದು ಹಲವರ ಅಭಿಪ್ರಾಯ. ಆದರೆ ಸಲ್ಮಾನ್ ಫ್ಯಾನ್ಸ್ ಮಾತ್ರ ಸಲ್ಲು ಭಾಯ್ ಹಾಕಿದ್ದೇ ಟ್ರೆಂಡ್. ಇದು ಅವರದ್ದೇ ಐಕಾನಿಕ್ ಸ್ಟೈಲ್ ಅಂತಿದ್ದಾರೆ.