ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ಇದೀಗ ಚೇತರಿಸಿಕೊಂಡಿದ್ದಾರೆ. ಇಂದು ಸಲ್ಮಾನ್ಗೆ ಹುಟ್ಟುಹಬ್ಬದ ಸಂಭ್ರಮ. ಸಂಭ್ರಮಾಚರಣೆಗೆಂದೇ ಸಲ್ಲು ಸ್ನೇಹಿತರ ಜೊತೆ ಫಾರ್ಮ್ ಹೌಸ್ಗೆ ತೆರಳಿದ್ದರು.
ಈ ವೇಳೆ ಸಲ್ಮಾನ್ಗೆ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸಲ್ಮಾನ್ ಖಾನ್ಗೆ ಕಚ್ಚಿದ್ದ ಹಾವು ವಿಷಕಾರಿ ಆಗಿರಲಿಲ್ಲ. ಹಾಗಾಗಿ ಅವರು ಆರಾಮಾಗಿದ್ದಾರೆ ಎಂದು ಸಲ್ಮಾನ್ ತಂದೆ ಮಾಹಿತಿ ನೀಡಿದ್ದಾರೆ. ಇದೀಗ ಪುನಃ ಸಲ್ಮಾನ್ ಫಾರ್ಮ್ ಹೌಸ್ಗೆ ತೆರಳಿದ್ದಾರೆ.