spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಕ್ಕಿ-ಕಟ್ರೀನಾ ಮದುವೆಗೆ ತಮ್ಮ ಬಾಡಿಗಾರ್ಡ್‌ನ್ನೇ ಕಳಿಸಿಕೊಟ್ರಾ ಸಲ್ಮಾನ್?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೀಕ್ರೆಟ್ ಆಗಿಯೇ ವಿಕ್ಕಿ ಕೌಶಲ್ ಹಾಗೂ ಕಟ್ರೀನಾ ಕೈಫ್ ಕಲ್ಯಾಣ ಜೈಪುರ್‌ನಲ್ಲಿ ನಡೆಯುತ್ತಿದೆ.
ಈ ಹಿಂದೆ ಸಲ್ಮಾನ್ ಖಾನ್ ಹಾಗೂ ಕಟ್ರೀನಾ ಕೈಫ್ ಡೇಟಿಂಗ್‌ನಲ್ಲಿದ್ರು ಎನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅದೇ ರೀತಿ ಪಬ್ಲಿಕ್‌ನಲ್ಲಿ ಕೂಡ ಇವರಿಬ್ಬರು ನಡ್ಕೊಳ್ತಿದ್ರು.
ಇದೀಗ ಇವರ ಕಲ್ಯಾಣಕ್ಕೆ ಸಲ್ಮಾನ್ ಖಾನ್‌ಗೆ ಆಹ್ವಾನ ಇದೆಯೋ ಇಲ್ವೋ ಎನ್ನೋ ವಿಷಯ ಸಾಕಷ್ಟು ಸುದ್ದಿ ಮಾಡ್ತಿದೆ.
ಸಲ್ಮಾನ್ ಖಾನ್‌ರನ್ನು ವಿಕ್ಕಿ-ಕಟ್ರೀನಾ ಮದುವೆಗೆ ಇನ್‌ವೈಟ್ ಮಾಡಿಲ್ವಂತೆ.
ಆದರೂ ಇವರಿಬ್ಬರ ಮದುವೆಗೆ ಸಲ್ಮಾನ್ ತಮ್ಮ ಪರ್ಸನಲ್ ಬಾಡಿಗಾರ್ಡ್ ಗುರ್ಮಿಂತ್ ಸಿಂಗ್ ಅವರನ್ನು ಕಳಿಸಿಕೊಟ್ಟಿದ್ದಾರೆ.
ಜೈಪುರದಲ್ಲಿ ಇವರಿಬ್ಬರಿಗೆ ಭದ್ರತೆ ನೀಡೋದಕ್ಕೆ ಸ್ವತಃ ತನ್ನ ಪರ್ಸನಲ್ ಬಾಡಿ ಗಾರ್ಡ್‌ನ್ನೇ ಸಲ್ಮಾನ್ ಕಳಿಸಿದ್ದು, ಸಲ್ಮಾನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಮದುವೆಗೆ ಕರೆಯದಿದ್ದರೂ ಸಲ್ಮಾನ್ ಈ ರೀತಿ ನಡೆದುಕೊಳ್ಳುತ್ತಿರೋದಕ್ಕೆ ಸಲ್ಮಾನ್ ವ್ಯಕ್ತಿತ್ವ ಎಷ್ಟು ಒಳ್ಳೆಯದು ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss