ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ತನ್ನ ಅಂಗಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತನ್ನ ಇಡೀ ಅಂಗಡಿಯನ್ನು ಕೇವಲ 1 ಡಾಲರ್ ಗೆ ಮಾರಾಟ ಮಾಡಿರುವ ಸುಂದರ ಘಟನೆ ಅಮೆರಿಕದ ನ್ಯೂ ಹೆವೆನ್ ನಲ್ಲಿ ನಡೆದಿದೆ.
ಕಳೆದ 55 ವರ್ಷಗಳಿಂದ ಸಲೂನ್ ನಡೆಸಿಕೊಂಡು ಬರುತ್ತಿದ್ದ ಪಿಯೋ ಇಂಪೆರಟಿ (79) 15 ವರ್ಷಗಳ ಹಿಂದೆ ಕಥಿ ಮೌರ ಎಂಬುವವರನ್ನು ಸಲೂನ್ ಕೆಲಸಕ್ಕೆ ಸೇರಿಸಿಕೊಂಡರು.
ಮೌರಗೆ ಅನುಭವ ಇಲ್ಲದ ಕಾರಣ ಬೇರೆ ಕಡೆಗಳಲ್ಲಿ ಆಕೆಯನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಬಳಿಕ ಪಿಯೋ ಅವರ ಸಲೂನ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಸತತ 15 ವರ್ಷದಿಂದ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಮೌರ ಬಗ್ಗೆ ಪಿಯೋ ಗೆ ತುಂಬಾ ಗೌರವ. ಅದೇ ಖುಷಿಗೆ ಆಕೆಗೆ ತನ್ನ ಇಡೀ ಸಲೂನ್ ನನ್ನು ಕೇವಲ ಒಂದು ಡಾಲರ್ ಅಂದರೆ 75 ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಈಕೆ ಒಬ್ಬ ಅತ್ಯುತ್ತಮ ಹೇರ್ ಡ್ರೆಸ್ಸರ್, ಈಕೆ ಎಲ್ಲಾ ಗ್ರಾಹಕರ ಮನಗೆದ್ದಿದ್ದಾಳೆ ಎನ್ನುತ್ತಾರೆ ಪಿಯೋ. ಸಣ್ಣ ವಯಸ್ಸಿನಿಂದಲೂ ಒಂದು ಬ್ಯುಜಿನೆಸ್ ನಡೆಸಬೇಕು ಎಂದುಕೊಂಡಿದ್ದ ನನಗೆ ಇದೊಂದು ವರವಾಗಿಯೇ ಸಿಕ್ಕಿತು. ಪಿಯೋ ಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು ಎನ್ನುತ್ತಾರೆ ಮೌರ.