ಹೊಸದಿಗಂತ ಆನ್ಲೈನ್ ಡೆಸ್ಕ್:
ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಆಗಿ ದಿನಗಳೇ ಕಳೆದಿದ್ದರೂ ಅಭಿಮಾನಿಗಳಿಗೆ ಈ ಘಟನೆ ಅರಗಿಸಿಕೊಳ್ಳೋಕೆ ಇನ್ನೂ ಆಗಿಲ್ಲ.
ಡಿವೋರ್ಸ್ ಬಳಿಕ ನಾಗಚೈತನ್ಯ-ಸಮಂತಾ ಸ್ನೇಹಿತರಾಗಿ ಇರುತ್ತಾರಾ? ಈಗ ಸಮಂತಾ ಎಲ್ಲಿದ್ದಾರೆ? ಮುಂದೆ ಎಲ್ಲಿಗೆ ಶಿಫ್ಟ್ ಆಗುತ್ತಾರೆ ಎನ್ನೋ ಪ್ರಶ್ನೆಗಳು ಎದುರಾಗುತ್ತಲೇ ಇವೆ.
ಇದೀಗ ಸ್ವತಂತ್ರವಾಗಿರಲು ಸಮಂತಾ ತೀರ್ಮಾನಿಸಿದ್ದು, ಹೈದರಾಬಾದ್ ಬಿಡಲಿದ್ದಾರೆ ಎನ್ನೋ ಸುದ್ದಿ ಕೇಳಿಬರುತ್ತಿದೆ. ಹೈದರಾಬಾದ್ನಲ್ಲಿ ಇಷ್ಟೂ ವರ್ಷ ಕಳೆದ ಸಮಂತಾ ಇದೀಗ ಹೈದರಾಬಾದ್ ತೊರೆದು ಮುಂಬೈ ಕಡೆ ಮುಖ ಮಾಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮುಂಬೈನಲ್ಲಿ ಸಮಂತಾ ಮನೆ ಹುಡುಕುತ್ತಿದ್ದು, ಹೈದರಾಬಾದ್ಗೆ ಸಂಪೂರ್ಣವಾಗಿ ಗುಡ್ಬೈ ಹೇಳುತ್ತಿದ್ದಾರೆ ಎನ್ನಲಾಗಿದೆ. ಜೀವನದ ಹೊಸ ಜರ್ನಿ ಆರಂಭಕ್ಕೆ ಹೊಸ ಜಾಗ ಹುಡುಕುತ್ತಿರೋ ಸಮಂತಾಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಹರಸುತ್ತಿದ್ದಾರೆ.