ಒಟಿಟಿಗೆ ಬರಲಿದೆ ಸಮಂತಾ ಅಭಿನಯದ ಯಶೋದ, ರಿಲೀಸ್ ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ಅಭಿನಯದ ಯಶೋದ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಥಿಯೇಟರ್‌ಗಳಲ್ಲಿ ಅಬ್ಬರಿಸಿದ ಯಶೋದ ಇದೀಗ ಒಟಿಟಿಗೆ ಬರಲಿದ್ದು, ಒಟಿಟಿ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ.
ಇನ್ನೇನು ಮೂರು ದಿನದಲ್ಲಿ ಯಶೋದಾ ಒಟಿಟಿಯಲ್ಲಿ ತೆರೆಕಾಣಲಿದೆ. ಡಿಸೆಂಬರ್ 9 ರಂದು ಯಶೋದ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ.

ಸರೋಗೆಸಿಯಲ್ಲಿ ತಾಯಿಯಾಗುತ್ತಿರುವ ಯಶೋದಾ, ತನ್ನ ಸಹೋದರಿಯ ಶಸ್ತ್ರಚಿಕಿತ್ಸೆಗಾಗಿ ಹಣ ಸಂಗ್ರಹಿಸುತ್ತಾಳೆ. ಈ ವೇಳೆ ಆಕೆಯ ಕಣ್ಣಿಗೆ ಬಹುದೊಡ್ಡ ಮೆಡಿಕಲ್ ಸ್ಕ್ಯಾಮ್ ಮಾಡುತ್ತದೆ. ಈ ಸ್ಟೋರಿಲೈನ್ ಇರುವ ಯಶೋದಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮಯೋಸೈಟಿಸ್‌ನಿಂದ ಬಳಲುತ್ತಿರುವ ಸಮಂತಾ ಇದೀಗ ಸೌತ್ ಕೊರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!