ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸಿನಿಮಾ ತಾರೆಯರಿಗೂ ಅವರಿಷ್ಟದ ತಾರೆಯರು ಇದ್ದೇ ಇರುತ್ತಾರೆ. ಜೀವನದಲ್ಲಿ ಒಂದು ಬಾರಿಯಾದ್ರೂ ಈ ನಟ ಅಥವಾ ನಟಿ ಜೊತೆ ಆಕ್ಟ್ ಮಾಡಬೇಕು ಅನ್ನೋ ಆಸೆ ಇರುತ್ತದೆ. ಇದೇ ರೀತಿ ಆಸೆಯನ್ನು ಬಹುಭಾಷಾ ತಾರೆ ಸಮಂತಾ ಅಕ್ಕಿನೇನಿ ಹೊರಹಾಕಿದ್ದಾರೆ.
ನನಗೆ ಮೂರು ನಟರ ಜೊತೆ ಅಭಿನಯಿಸುವ ಆಸೆ ಎಂದು ಅವರು ಹೇಳಿದ್ದಾರೆ. ಅದರಲ್ಲಿ ಈಗಾಗಲೇ ಇಬ್ಬರು ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದೇನೆ. ಮೂರನೇ ನಟನ ಜೊತೆ ಅಭಿನಯಿಸೋಕೆ ಅವಕಾಶ ಸಿಕ್ಕಿಲ್ಲ ಎಂದು ಸಮಂತಾ ಹೇಳಿದ್ದಾರೆ.
ಸೂಪರ್ ಸ್ಟಾರ್ ಸೂರ್ಯ, ಮಹೇಶ್ ಬಾಬು ಹಾಗೂ ಶಾರುಖ್ ಖಾನ್ ಸಮಂತಾ ಫೇವರೆಟ್ಸ್. ಈಗಾಗಲೇ ಸೂರ್ಯ ಹಾಗೂ ಮಹೇಶ್ ಬಾಬು ಅವರ ಜೊತೆ ಅಭಿನಯ ಮಾಡಿ ಆಗಿದೆ. ಶಾರುಖ್ ಅವರ ಜೊತೆ ಆಕ್ಟ್ ಮಾಡಬೇಕು ಎಂದು ಸಮಂತಾ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಸಮಂತಾ ಆಸೆ ಈಡೇರಿ, ಶಾರುಖ್ ಸಮಂತಾ ಸಿನಿಮಾ ತೆರೆಮೇಲೆ ಬರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.