spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಂಬರಿಗೂ ಸೈ , ಶರಬತ್ತಿಗೂ ಜೈ … ಇಲ್ಲಿದೆ ನೋಡಿ ಅಪರೂಪದ ಬಳ್ಳಿ ಬದನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಬಳ್ಳಿ ಬದನೆ, ಇದರ ಹೆಸರೇ ಸೂಚಿಸುವಂತೆ ಬಳ್ಳಿಯಲ್ಲಿ ಬೆಳೆಯುವ ತರಕಾರಿಯಾಗಿದೆ. ಒಮ್ಮೆ ನೆಟ್ಟರೆ ದೀರ್ಘಕಾಲ ಬಾಳಿಕೆ ಬರುವ ಸಸ್ಯ ಪ್ರಬೇಧ ಇದಾಗಿದ್ದು, ಈಗ ಇವುಗಳನ್ನು ಸಾಮಾನ್ಯ ಚಪ್ಪರಗಳಲ್ಲಿಯೂ ಬೆಳೆಸಬಹುದಾಗಿದೆ. ಪಾಶ್ಚಾತ್ಯ ರಾಜ್ಯಗಳಲ್ಲಿ ಇವುಗಳನ್ನು ಮನೆಯ ಅಲಂಕಾರಿಕ ವಸ್ತುಗಳನ್ನಾಗಿ ಬೆಳೆಸುತ್ತಾರೆ. ಇದರ ಕಾಯಿಗಳನ್ನು ಪಲ್ಯ, ಸಾಂಬಾರುಗಳಿಗೆ ಉಪಯೋಗಿಸಬಹುದಾಗಿದ್ದು, ಬಹು ರುಚಿಕರವಾಗಿ ಸುವಾಸನಾಭರಿತವಾಗಿದೆ. ಹಣ್ಣುಗಳಿಂದ ಶರಬತ್ತೂ ತಯಾರಿಸಬಹುದು. ಹಣ್ಣುಗಳು ರುಚಿಕರವಾಗಿದ್ದು ಸೇವಿಸಲು ಯೋಗ್ಯವಾಗಿದೆ. ಹಣ್ಣಿನ ಬೀಜಗಳಿಂದ ಇದರ ಗಿಡಗಳನ್ನು ತಯಾರಿಸಿದರೆ ಫಲ ನೀಡುವುದು ವಿಳಂಬವಾಗಿದೆ. ಬಲಿತ ಬಳ್ಳಿಯ ತುದಿಯಿಂದ ತಯಾರಿಸಿದ ಗಿಡಗಳನ್ನು ನೆಟ್ಟು ಬೆಳೆಸಿದರೆ ಬಹಳ ಬೇಗನೆ ಕಾಯಿ ಹಿಡಿಯಲು ಪ್ರಾರಂಭಿಸುತ್ತದೆ. ಇದರ ಹೂವುಗಳನ್ನು ಪರಾಗಸ್ಪರ್ಶ ಮಾಡಿದರೆ ತುಂಬಾ ಕಾಯಿಗಳು ಯಾವಾಗಲೂ ಸಿಗುತ್ತಿರುತ್ತವೆ. ಬಲಿಷ್ಠವಾದ ಬಳ್ಳಿ ಆದ ಕಾರಣ ಗಟ್ಟಿಯಾದ ಚಿಕ್ಕ ಚಪ್ಪರ ಮಾಡಿ ಬೆಳೆಸಿದರೆ ಪರಾಗಸ್ಪರ್ಷ ಮಾಡಲು ಅನುಕೂಲ. `ಫ್ಯಾಶನ್ ಫ್ರುಟ್’ ಬಳ್ಳಿಯನ್ನು ಇದರೊಂದಿಗೆ ಬೆಳೆಸಿದರೆ ಪರಾಗಸ್ಪರ್ಶ ಪ್ರಕ್ರಿಯೆ ಸುಲಭದಲ್ಲಿ ಜೇನುನೊಣಗಐ ಮೂಲಕ ನಡೆಯುತ್ತದೆ. ಆಂಗ್ಲ ಭಾಷೆಯಲ್ಲಿ `ಪ್ಯಾಸಿಫ್ಲೋರಾ ಕ್ವಾಡಮಿ ಅನಾಂಗ್ಲೋರಿಸ್’ ಅಥವಾ `ಗ್ರಾಂಡಿಲ್ಯಾ’ ಎಂದೂ ಮಲಯಾಳದಲ್ಲಿ `ಆಕಾಶ ವೆಳ್ಳರಿ’ ಎಂದೂ ಕರೆಯಲ್ಪಡುತ್ತದೆ. ತಾರಸಿಯ ಮೇಲೆ ಅಲ್ಲದೆ ಎಲ್ಲಿ ಕೂಡಾ ಇದನ್ನು ಬೆಳೆಸಬಹುದಾಗಿದೆ. ಕೆಲವೊಂದು ಬಳ್ಳಿ ತರಕಾರಿಗಳಾದ ಅಡತಾವು, ಬಳ್ಳಿ ಬಟಾಟೆ, ಕಾಡುಪೀರೆ, ಮಡಹಾಗಲ ಇಂಥ ಕೆಲವು ಅಪರೂಪದ ಬಳ್ಳಿ ತರಕಾರಿಗಳನ್ನು ನಾವು ನೆಟ್ಟು ಬೆಳೆಸಬೇಕಾಗಿದೆ. ಕೆಲವೊಂದು ಬಳ್ಳಿ ತರಕಾರಿಗಳು ಇಂದು ಅಳಿವಿನಂಚಿಗೆ ಸಾಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ನಾವು ಮಾಡಬೇಕಾಗಿದೆ. ವಿಟಮಿನ್ ಮತ್ತು ಜೀವ ಸತ್ವಗಳ ಆಗರವಾಗಿದೆ. ಈ ತರಕಾರಿಗಳು ಎಂಬುದನ್ನು ನಾವು ಮರೆಯಬಾರದು. ಬದಿಯಡ್ಕ ಸಮೀಪದ ಕಂಗಿಲ ಶಿವಪ್ರಸಾದ (6282991799)ಎಂಬವರು ಇದನ್ನು ಬೆಳೆಸುತ್ತಿದ್ದಾರೆ. ಸದಾ ವಿವಿಧ ರೀತಿಯ ಗಿಡಗಳನ್ನು ಬೆಳೆಸುವಲ್ಲಿ ಆಸಕ್ತಿ ವಹಿಸುತ್ತಿರುವ ಅವರ ಮನೆಯಲ್ಲಿ ಬೇರೆ ಬೇರೆ ತರಕಾರಿ ಗಿಡಗಳನ್ನು ಕಾಣಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss