ಸಲಿಂಗ ವಿವಾಹ ಮಾನ್ಯತೆ ಕುರಿತ ಅರ್ಜಿ: ಏಪ್ರಿಲ್​ 18ಕ್ಕೆ ವಿಚಾರಣೆ ಮುಂದೂಡಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಸಲಿಂಗ ವಿವಾಹ ಮಾನ್ಯತೆ ಕುರಿತ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಏಪ್ರಿಲ್​ 18ಕ್ಕೆ ಮುಂದೂಡಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಸೋಮವಾರ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಏಪ್ರಿಲ್ 18, 2023ರಂದು ನಿಗದಿಪಡಿಸಲಾಗಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರ ಸರ್ಕಾರ ಭಾನುವಾರ (ಮಾ.12) ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ ವರ್ಗಗಳಾಗಿದ್ದು, ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸುಪ್ರೀಂಕೋರ್ಟ್​​ನಲ್ಲಿ ಹೇಳಿತ್ತು.

ದೆಹಲಿ ಹೈಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಜನವರಿ 6 ರಂದು ಸುಪ್ರೀಂಕೋರ್ಟ್ ಒಟ್ಟಿಗೆ ಸೇರಿಸಿ ವರ್ಗಾಯಿಸಿಕೊಂಡಿತ್ತು. ಕೇಂದ್ರದ ಪರ ವಾದ ಮಂಡಿಸುತ್ತಿರುವ ವಕೀಲರು ಮತ್ತು ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ಅರುಂಧತಿ ಕಾಟ್ಜು ಅವರು ಲಿಖಿತ ಸಲ್ಲಿಕೆಗಳು, ದಾಖಲೆಗಳು ಮತ್ತು ಪೂರ್ವನಿದರ್ಶನಗಳ ಸಾಮಾನ್ಯ ಸಂಕಲನವನ್ನು ಸಿದ್ಧಪಡಿಸಬೇಕು ಎಂದು ಅದು ಹೇಳಿದೆ. ಸಂಕಲನಗಳ ವಿದ್ಯುನ್ಮಾನ ಪ್ರತಿ (Soft copy) ಕಕ್ಷಿದಾರರ ನಡುವೆ ವಿನಿಮಯ ಮಾಡಿಕೊಳ್ಳಬೇಕು ಮತ್ತು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ಮಾಡಬೇಕು. ಸಂಬಂಧಿತ ಅರ್ಜಿಗಳು ಮತ್ತು ವರ್ಗಾವಣೆಗೊಂಡ ಪ್ರಕರಣಗಳೊಂದಿಗೆ ಇಂದು (ಮಾರ್ಚ್ 13, 2023) ರಂದು ನಿರ್ದೇಶನಗಳಿಗಾಗಿ ವಿಚಾರಣೆ ನಡೆಯಲಿದೆ ಎಂದು ಪೀಠವು ತನ್ನ ಜನವರಿ 6 ರ ಆದೇಶದಲ್ಲಿ ಹೇಳಿದೆ. ಆದರೆ ಇದೀಗ ಇಂದು ನಡೆಸಿದ ವಿಚಾರಯ ತೀರ್ಪುನ್ನು ನೀಡಿದ ಸುಪ್ರೀಂ ಈ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ. ಕೆಲವೊಂದು ಕಾನೂನತ್ಮಕ ವಿಚಾರಣೆಗಳನ್ನು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳಲು ಅಧ್ಯಯನದ ಅಗತ್ಯ ಇದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!