Friday, August 12, 2022

Latest Posts

ಮರಳು, ಧೂಳು ತುಂಬಿದ ಬಿರುಗಾಳಿ: 400ಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಚೀನಾದ ಉತ್ತರ ಭಾಗ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿ ಮರಳು, ಧೂಳು ತುಂಬಿದ ಬಿರುಗಾಳಿ  ಬೀಸುತ್ತಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ವಿಮಾನಗಳ ಹಾರಟವನ್ನು ಸ್ಥಗಿತಗೊಳಿಸಲಾಗಿದೆ.

ಎತ್ತರವಾದ ಕಟ್ಟಡಗಳಲ್ಲಿ ಧೂಳು ಮತ್ತು ಮರಳು ತುಂಬಿದೆ. ಸಂಚಾರ ದಟ್ಟಣೆ ಕೂಡ ಎದುರಾಗಿದೆ. ಹತ್ತು ವರ್ಷಗಳಿಂದೀಚೆಗೆ ಈ ರೀತಿಯ ಬಿರುಗಾಳಿ ಎದ್ದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಹಾಗಾಗಿ ಬೀಜಿಂಗ್‌ನ ಪ್ರಮುಖ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನಕ್ಕೂ ಮುನ್ನ 400 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss