Sunday, August 14, 2022

Latest Posts

ಮರಳು ದಂಧೆಕೋರರ ವಿರುದ್ಧ ಕ್ರಮಕ್ಕೆ ಸಿದ್ದಲಿಂಗ ಶ್ರೀ ಆಗ್ರಹ

ಹೊಸ ದಿಗಂತ ವರದಿ, ಕಲಬುರಗಿ: 

ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಹುಲ್ಲೂರ ಗ್ರಾಮದ ಭೀಮಾ ನದಿಯಲ್ಲಿ ಹಲವು ದಿನಗಳಿಂದ ಮಹಾರಾಷ್ಟ್ರದ ಸೋಲಾಪುರ ಮೂಲದ ಸುರೇಶ ಕಾಟೇಗಾಂವ ಎಂಬುವವರು ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದು, ಸಂಬಂಧಪಟ್ಟವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೃಹತ ಮಟ್ಟದ ಹಿಟ್ಯಾಚಿಗಳನ್ನು ಬಳಕೆ ಮಾಡಿಕೊಂಡು ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದಾರೆ. ಈ ಅಕ್ರಮ ಚಟುವಟಿಕೆಗಳು ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರು, ಸುರೇಶ ಎಂಬುವರಿಂದ ಹಣವನ್ನು ಪಡೆದು, ಅಕ್ರಮ ಕೃತ್ಯಕ್ಕೆ ಬೀಟ್ ಪೋಲಿಸನಿಂದ ಠಾಣೆಯ ಎಲ್ಲ ಅಧಿಕಾರಿಗಳು ಹಣ ಪಡೆದು ಅಕ್ರಮ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.

3500 ಮೆಟ್ರಿಕ್ ಟನ್ ಮರಳು ಸೀಜ್ ಮಾಡಿದ್ದೇವೆ ಎಂದು ಜೇವರ್ಗಿ ತಹಶೀಲ್ದಾರರು ತಿಳಿಸುತ್ತಾರೆ. ಅದನ್ನು ರವಾನೆ ಸರಬರಾಜು ಮಾಡಲು ಕಾನೂನು ಬಾಹಿರವಾಗಿ ಸುರೇಶ ಕಾಟೇಗಾವ್ ಅವರಿಗೆ ತಹಶೀಲ್ದಾರರು ವಹಿಸಿದ್ದಾರೆ. ಆದರೆ, ಅಕ್ರಮ ಮರಳು ಸಂಗ್ರಹಿಸಿದವರು ಯಾರು ಎಂದು ಇಲ್ಲಿಯವರೆಗೆ ತನಿಖೆ ನಡೆಸಿಲ್ಲ ಎಂದರು. ಮರಳು ನೀತಿ ನಿಯಮದ ಪ್ರಕಾರ ಹರಾಜು ಹಾಕಬೇಕು. ಆದರೆ ಇಲ್ಲಿ ನಿಯಮ ಮೀರಿ, ದಿನ ನಿತ್ಯವೂ ಸರಿ ಸುಮಾರು 300 ಟಿಪ್ಪರಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ದೂರಿದರು.

15000 ಮೆಟ್ರಿಕ್ ಟನ್ ಮರಳು ಸಂಗ್ರಹಿಸಿ, ತಾಲೂಕಿನ ಆಡಳಿತಕ್ಕೆ ಕೇವಲ 3500 ಟನ್,ನಷ್ಟು ಎಂದು ಸುಳ್ಳು ಲೆಕ್ಕವನ್ನು ಕೊಟ್ಟು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದರು. ಕೂಡಲೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಮೂರು ದಿನಗಳ ಒಳಗಾಗಿ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಅನಿರ್ಧಿಷ್ಟ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರ, ಲಿಂಗನಗೌಡ ಪಾಟೀಲ,ಸಂತೋಷ ಬೆನಕನಳ್ಳಿ, ಗುರುಶಾಂತ ಟೆಂಗಳಿ ಸೇರಿದಂತೆ ಹಲವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss