Thursday, August 18, 2022

Latest Posts

ಸ್ಯಾಂಡಲ್​ವುಡ್​​ ಡ್ರಗ್ಸ್ ಕೇಸ್: 2,900ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಸಿಸಿಬಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸ್ಯಾಂಡಲ್​ವುಡ್​​ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕೋರ್ಟಿಗೆ ಬರೋಬ್ಬರಿ 2,900ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಎನ್​​ಡಿಪಿಎಸ್​ ಕೋರ್ಟಿಗೆ ಸಿಸಿಬಿ ತನಿಖಾಧಿಕಾರಿ ಪುನೀತ್ ಅವರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 25 ಮಂದಿಯ ವಿರುದ್ಧ ಪೊಲೀಸರು 180 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ 5 ವಾಲ್ಯಮ್​​ಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನು ಮೂವರು ಆರೋಪಿಗಳನ್ನು ಬಂಧನ ಮಾಡಬೇಕಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರನ್ನು ಚಾರ್ಜ್​​ಶೀಟ್​​ನಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರಕರಣದಲ್ಲಿ ರಾಗಿಣಿ, ಸಂಜನಾ, ರಾಹುಲ್, ವಿರೇನ್ ಖನ್ನಾ, ಆದಿತ್ಯಾ ಆಳ್ವಾ, ವೈಭವ್ ಸೇರಿದಂತೆ ಆಫ್ರಿಕಾ ಮೂಲದ 4 ಮಂದಿಯ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ.
ಸದ್ಯ ಪ್ರಕರಣ ಪ್ರಮುಖ ಆರೋಪಿಗಳು ಜಾಮೀನು ಮೇಲೆ ಹೊರ ಬಂದಿದ್ದಾರೆ. ಚಾರ್ಜ್ ಶೀಟ್​​​ನಲ್ಲಿ ಆರೋಪಿಗಳ ಹೇಳಿಕೆಗಳೇ ಪ್ರಮುಖ ಸಾಕ್ಷಿಗಳಾಗಿದ್ದು, ಒಂದು ಕಡೆ ಡ್ರಗ್ಸ್​ ತೆಗೆದುಕೊಳ್ಳುವುದರೊಂದಿಗೆ, ಡ್ರಗ್ಸ್ ಪೆಡ್ಲಿಂಗ್ ಕೂಡ ಮಾಡಿದ್ದಾರೆ. ತಾವು ಖರೀದಿಸಿ ಬೇರೆಯವರಿಗೆ ನೀಡಿದನ್ನ ತೋರಿಸಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!