ಸ್ಯಾಂಡಲ್‌ವುಡ್ ಯುವನಟ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಯುವ ನಟ ಧನುಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸಂಪಿಗೆಹಳ್ಳಿ ಕೊಟ್ಲಲ್ಲಪ್ಪೋ ಕೈ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದ ಧನುಷ್ ಚಿತ್ರೀಕರಣಕ್ಕಾಗಿ ಲಡಾಖ್‌ಗೆ ತೆರಳಿದ್ದರು.

ಲಡಾಖ್ ವಾತಾವರಣ ಹಿಡಿಸದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣವೇ ಬೆಂಗಳೂರಿಗೆ ಅವರನ್ನು ಕರೆತರಲಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಧನುಷ್ ಮೃತಪಟ್ಟಿದ್ದಾರೆ. ಪ್ಯಾರ್ ಕಾ ಗೋಲ್‌ಗುಂಬಝ್, ಸ್ನೇಹಿತ, ಶಿವರಾಜ್‌ಕುಮಾರ್ ನಟನೆಯ ಲೀಡರ್ ಸಿನಿಮಾಗಳಲ್ಲಿ ಧನುಷ್ ನಟಿಸಿದ್ದರು. ಬಾಗಲಕೋಟೆಯ ಕೋಡಿಹಾಳ ಜಿಲ್ಲೆಯ ಧನುಷ್‌ರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!