ಸಾನಿಯಾ ಮಿರ್ಜಾ- ಶೋಯೆಬ್‌ ಮಲಿಕ್‌ ವಿಚ್ಛೇದನ?: ಮತ್ತಷ್ಟು ಶಂಕೆ ಹುಟ್ಟಿಸಿದ ಪೋಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ನಡುವೆ ವೈಮನಸ್ಸು ಉಂಟಾಗಿದ್ದು, ಇಬ್ಬರು ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ.

ಇದೀಗ ಈ ಮಾತಿಗೆ ಪುಷ್ಟಿ ನೀಡುವಂತೆ ಸಾನಿಯಾ ಮಿರ್ಜಾಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಇನ್ಸ್‌ಟಾಗ್ರಾಂ ಸ್ಟೋರಿಯಲ್ಲಿ “ಮುರಿದ ಹೃದಯಗಲು ಎಲ್ಲಿಗೆ ಹೋಗುತ್ತವೆ. ಅಲ್ಲಾನ ಹುಡುಕಲು ಹೋಗುತ್ತವೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇವರಿಬ್ಬರು ದೂರವಾಗಿದ್ದಾರೆ ಎಂಬ ಮಾತಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಇನ್ನೊಂದು ಹುಡುಗಿಯ ಜೊತೆ ಶೋಯೆಬ್‌ ಮಲಿಕ್‌ಗೆ ಸಂಬಂಧವಿತ್ತು ಎಂಬ ಆರೋಪವೂ ಕೇಳಿ ಬಂದಿದ್ದು, ಇಬ್ಬರ ನಡುವೆ ಕೆಲ ಸಮಯದಿಂದ ಎಲ್ಲವೂ ಸರಿಯಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಮತ್ತು ಮಗ ಇಜಾನ್‌ನನ್ನು ಒಬ್ಬೊಬ್ಬರು ಒಂದಷ್ಟು ದಿನ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ 2010ರಲ್ಲಿ ಮದುವೆಯಾಗಿದ್ದರು. ಎರಡು ದೇಶಗಳ ನಡುವೆ ದ್ವೇಷಗಳಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ದೇಶಗಳ ಹಂಗು ಮೀರಿ ಇಬ್ಬರೂ ಮದುವೆಯಾಗಿದ್ದರು.

ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್‌ ಮಲಿಕ್‌ ಸಾನಿಯಾ ಮಿರ್ಜಾ ಅವರಿಗೆ ವಂಚಿಸಿದ್ದಾರೆ. ಅವರು ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು. ಇದು ತಿಳಿದ ನಂತರ ಸಾನಿಯಾ ಮತ್ತು ಶೋಯೆಬ್‌ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಈ ಊಹಾಪೋಹಗಳ ಕುರಿತು ಇಬ್ಬರೂ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!