ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆಗಿ ಆಯ್ಕೆಯಾದ ಸಾನಿಯಾ ಮಿರ್ಜಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಿಮಾನಯಾನದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಯುವತಿಯೊಬ್ಬರು ಸಜ್ಜಾಗಿದ್ದಾರೆ. ಅವರೇ ಉತ್ತರ ಪ್ರದೇಶದ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಎಂಬ ಸಣ್ಣ ಹಳ್ಳಿಯ ಮೂಲದ ಸಾನಿಯಾ ಮಿರ್ಜಾ.

ಟಿವಿ ಮೆಕ್ಯಾನಿಕ್ ಶಾಹಿದ್ ಅಲಿ ಅವರ ಪುತ್ರಿ ಸಾನಿಯಾ ಮಿರ್ಜಾ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯಲ್ಲಿ ಒಟ್ಟಾರೆ 149 ನೇ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ಮಿರ್ಜಾಪುರದ ಸಾನಿಯಾ, ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಎನಿಸಿಕೊಳ್ಳಲಿದ್ದಾರೆ.

ಎನ್‌ಡಿಎ ಪರೀಕ್ಷೆಯಲ್ಲಿ (NDA Exams) ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ 2ನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು.

ಸಾನಿಯಾತನ್ನ ಹಳ್ಳಿಯ ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ಪ್ರೌಢಶಾಲೆಯನ್ನು ಪೂರ್ಣಗೊಳಿಸಿದರು. ‘ಫಿಗ್ ಪೈಲಟ್ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ ಎರಡು ಸೀಟುಗಳನ್ನು ಮೀಸಲಿಡಲಾಗಿತ್ತು. ಮೊದಲ ಪ್ರಯತ್ನದಲ್ಲಿ ನಾನು ಸೀಟು ಹಿಡಿಯಲು ವಿಫಲಳಾಗಿದ್ದೆ ). ಆದರೆ, ಎರಡನೇ ಪ್ರಯತ್ನದಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾದೆ’ ಎಂದು ಸಾನಿಯಾ ಖುಷಿಯಿಂದ ಹೇಳಿದ್ದಾರೆ.

ಇಂಗ್ಲಿಷ್‌ನಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳನ್ನು ಈ ಅಸ್ಕರ್ ಲೀಗ್‌ಗೆ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ 27, 2022ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಾನಿಯಾ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದರ ಪ್ರಕಾರ, ಸಾನಿಯಾ ಮಿರ್ಜಾ ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಮುಸ್ಲಿಂ ಫೈಲಟ್ ಆಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!