ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸ್ಯಾಂಟ್ರೋ ರವಿ ಕೇಸ್ ಸಿಒಡಿಗೆ ವಹಿಸಿರುವುದು ಕಣ್ಣೋರೆಸುವ ತಂತ್ರ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಮಂಗಳವಾರ ಪಂಚರತ್ನ ಯಾತ್ರೆ ಬಳಿಕ ಮಾತನಾಡಿದ ಅವರು, ಒಂದು ತಿಂಗಳೊಳಗಾಗಿ ಕೇಸ್ ಮುಚ್ಚಿ ಹಾಕುತ್ತಾರೆ. ಇದರಲ್ಲಿ ಘಟಾನುಘಟಿ ನಾಯಕರಿದ್ದಾರೆ ಎಂದರು.
ಅಲ್ಲದೆ, ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ 13 ಸಚಿವರ ಸಿಡಿ ಚುನಾವಣೆ ಮುನ್ನವೇ ಬಿಡುಗಡೆ ಮಾಡುವ ಬಗ್ಗೆ ಸಿ.ಎಂ. ಇಬ್ರಾಹಿಂ ಹೇಳಿಕೆ ಪ್ರತಿಕ್ರಿಯಿಸಿ, ಸಿಡಿ ಬಗ್ಗೆ ನಾನು ಮಾತಾಡಲ್ಲ. ಯಾರು ಹೇಳಿದ್ದಾರೋ ಅವರನ್ನೆ ಕೇಳಿ ಎಂದ ಅವರು, ಸಿಡಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.