CINE | ಸಾನ್ಯಾ ಮಲ್ಹೋತ್ರಾ- ರಿಷಬ್‌ ಬ್ರೇಕಪ್‌? ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡ ಸೆಲೆಬ್ರಿಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಸಾನ್ಯಾ ಮಲ್ಹೋತ್ರಾ ಹಾಗೂ ಸಿತಾರ್‌ ವಾದಕ ರಿಷಬ್‌ ನಡುವೆ ಬ್ರೇಕಪ್‌ ಆಗಿದೆ. ಕಳೆದ ಒಂದು ವರ್ಷದಿಂದ ಜೊತೆಗೆ ಇದ್ದ ಜೋಡಿ ಮಧ್ಯೆ ಬಿರುಕು ಉಂಟಾಗಿದ್ದು, ಇನ್ಸಟಾಗ್ರಾಮ್‌ನಲ್ಲಿಯೂ ಅನ್‌ಫಾಲೋ ಮಾಡಿಕೊಂಡಿದ್ದಾರೆ. ರಿಷಬ್ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ಆದರೆ ಅವರು ಅದನ್ನು ಖಾಸಗಿಯಾಗಿ ಇಡಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮೂಲವೊಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. ಸಾನ್ಯಾ ಮತ್ತು ರಿಷಬ್ ತಮ್ಮ ಸಂಬಂಧವನ್ನು ಸರಳವಾಗಿ ಇಟ್ಟುಕೊಂಡಿದ್ದರು, ಸಾರ್ವಜನಿಕವಾಗಿ ವಿರಳವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.