Tuesday, August 16, 2022

Latest Posts

ಸಲ್ಮಾನ್‌ ಖಾನ್‌ ಗೆ ‌ʼಅಂಕಲ್‌ʼ ಎಂದ ಸಾರಾ: ʼಸುಲ್ತಾನ್‌ʼ ರಿಪ್ಲೈ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬಾಲಿವುಡ್‌ನ ಸಲ್ಲುಮಿಯಾಗೆ ಸೈಫ್‌ ಪುತ್ರಿ ʼಅಂಕಲ್‌ʼ ಎಂದು ಸಂಬೊಧಿಸಿದ್ದಾರೆ. ಯಸ್…‌ ಸಾರಾ ಅಲಿ ಖಾನ್‌ ಇಂಥದ್ದೊಂದು ʼಸಾಹಸʼ ಮಾಡಿದ್ದಾಳೆ. ಇತ್ತೀಚೆಗೆ ನಡೆದ ಅವಾರ್ಡ್‌ ಫಂಕ್ಷನ್‌ವೊಂದರಲ್ಲಿ ಸಾರಾ ಅಲಿ ಖಾನ್‌ ಸಲ್ಲು ಭಾಯ್ ಗೆ ʼಸಲ್ಮಾನ್‌ ಅಂಕಲ್‌ʼ ಎಂದು ಕರೆದಿದ್ದಾಳೆ. ಅದಕ್ಕೆ ಸಲ್ಮಾನ್‌ ರಿಯಾಕ್ಷನ್‌ ಹೇಗಿತ್ತು ಅಂತ ಕೇಳಿದ್ರೆ ನೀವು ಪಕ್ಕಾ ದಂಗಾಗ್ತೀರಾ.

ʼಅಂಕಲ್‌ ಎನ್ನುವ ಮೂಲಕ ನೀನು ನನ್ನೊಂದಿಗೆ ಹೀರೋಯಿನ್‌ ಆಗುವ ಅವಕಾಶ ಕಳಕೊಂಡೆʼ ಎಂದಿರುವ ಸಲ್ಲುಮಿಯಾ ತಮಾಷೆಯಾಗಿ ನಕ್ಕಿದ್ದಾರೆ. ಈ ಮಾತನ್ನು ಕೇಳಿ ತನ್ನ ತಪ್ಪಿಗೆ ಸಾರಾ ಒಳಗೊಳಗೇ ದುಖಃಪಟ್ಟಿದ್ದಾಳೇನೋ.

ಸಲ್ಮಾನ್ ಖಾನ್ ಮತ್ತು ಸಾರಾ ಅಲಿ ಖಾನ್ IIFA ಅವಾರ್ಡ್ಸ್ 2022 ರಲ್ಲಿ ಚಾಟ್‌ನಲ್ಲಿ ತೊಡಗಿದ್ದರು. ಅವರ ತಮಾಷೆಯ ಕಿರು ಕ್ಲಿಪ್ ಅನ್ನು ಕಲರ್ಸ್ ಟಿವಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅದರಲ್ಲಿ ಅಂಕಲ್‌ ಎನ್ನುವ ಮೂಲಕ ಸಾರಾ ಸಲ್ಮಾನ್‌ ಕಾಲೆಳೆಯಲು ನೋಡಿದ್ದಾಳೆ. . 56 ವರ್ಷದ ನಟ ಸಲ್ಮಾನ್‌ ಖಾನ್, ಸಾರಾ ಅವರಿಗಿಂತ 30 ವರ್ಷ ದೊಡ್ಡವರು. ಅದರೆ ಅದಕ್ಕೆ ದಬಂಗ್‌ ಚುಲ್‌ಬುಲ್‌ ಪಾಂಡೇ ತಮಾಷೆಯಾಗೇ ತಿರುಗೇಟು ನೀಡಿದ್ದಾರೆ. ಕಾಲೆಳೆಯಲು ಹೋದ ಸಾರಾ ತಾನೇ ಕಾಲೆಳಿಸಿಕೊಂಡಿದ್ದಾಳೆ. ಈ ವೀಡಿಯೋ ಇಂಟರ್‌ ನೆಟ್‌ ನಲ್ಲಿ ಸಖತ್‌ ವೈರಲ್‌ ಆಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss