ಬಣ್ಣದ ಜಗತ್ತಿಗೆ ಕ್ರಿಕೆಟ್ ದಿಗ್ಗಜ ಸಚಿನ್ ಪುತ್ರಿ ಸಾರಾ ಎಂಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್​ ಮತ್ತೊಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಎಂಟ್ರಿ ಪಡೆಯಲು ತುದಿಗಾಲ ಮೇಲೆ ನಿಂತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಶೀಘ್ರದಲ್ಲೇ ಬಾಲಿವುಡ್​ನ ಬಣ್ಣದ ಜಗತ್ತಿಗೆ ಕಾಲಿಡಲಿದ್ದಾರಂತೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾರಾ ತೆಂಡೂಲ್ಕರ್ ಈಗಾಗಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಕಿಡ್ , ನಟನೆಯನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ.
ತಮ್ಮ ಮೊದಲ ಮಾಡೆಲಿಂಗ್ ವಿಡಿಯೋದಲ್ಲಿ ಸಾರಾ, ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿತ್ತು.
ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದರೆ, ಸಾರಾ ಸಿನಿಮಾದತ್ತ ಮುಖ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.ಫ್ಯಾಷನ್​ನಿಂದಲೇ ಗಮನ ಸೆಳೆಯುತ್ತಿರುವ ಸಾರಾ​ ಈಗ ದೇಶಾದ್ಯಂತ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳ ಪೈಕಿ ಇವರು ಕೂಡ ಒಬ್ಬರು.ಜನಪ್ರಿಯ ಉಡುಪಿನ ಬ್ರ್ಯಾಂಡ್​​​​ವೊಂದಕ್ಕೆ ಮಾಡೆಲ್​ ಆಗಿರುವ ಈ ಕ್ರಿಕೆಟ್​ ಸೆಲೆಬ್ರಿಟಿಯ ಪುತ್ರಿ ನ್ಯಾಷನಲ್​ ಕ್ರಷ್​ ಸ್ಥಾನ ಸಹ ಅಲಂಕರಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!