Monday, August 8, 2022

Latest Posts

ಪ್ರದರ್ಶನ ನಿಲ್ಲಿಸಿದ ಮೈಸೂರಿನ ಸರಸ್ವತಿ ಥಿಯೇಟರ್!

ಹೊಸದಿಗಂತ ವರದಿ, ಮೈಸೂರು:

ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಪರಿಣಾಮದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಗರದ ಚಿತ್ರಮಂದಿರಗಳು ಒಂದೊoದಾಗಿ ಪ್ರದರ್ಶನವನ್ನು ನಿಲ್ಲಿಸಿ ತೆರೆಮರೆಗೆ ಸರಿಯುತ್ತಿವೆ. ಈಚೆಗಷ್ಟೇ ಶಾಂತಲಾ ಹಾಗೂ ಲಕ್ಷ್ಮಿ ಥಿಯೇಟರ್‌ಗಳು ಆರ್ಥಿಕ ಸಂಕಷ್ಟದಿoದ ಕಾರಣದಿಂದ ಮುಚ್ಚಿದವು. ಇದೀಗ ಅದೇ ಕಾರಣದಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ ಕೂಡ ಇತಿಹಾಸದ ಪುಟ ಸೇರಿದೆ.
ಕೊರೋನಾ ಲಾಕ್‌ಡೌನ್‌ನಿಂದಾಗಿರುವ ಆರ್ಥಿಕ ಸಂಕಷ್ಟದಿoದಾಗಿ ಸರಸ್ವತಿ ಚಿತ್ರಮಂದಿರ ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ.
ಬಹು ವಿಶಾಲವಾದ ದೊಡ್ಡ ಚಿತ್ರಮಂದಿರ ಎಂದೇ ಪ್ರಸಿದ್ಧವಾಗಿದ್ದ ಸರಸ್ವತಿಪುರಂ ಸೇರಿದಂತೆ ಸುತ್ತಮುತ್ತನ ಏರಿಯಾ ಸಿನಿಪ್ರಿಯರಿಗೆ ಸರಸ್ವತಿ ಚಿತ್ರಮಂದಿರ ಮೆಚ್ಚಿನ ಥಿಯೇಟರ್ ಆಗಿತ್ತು. ರಾಜ್‌ಕುಮಾರ್ ಅವರ ಕುಟುಂಬಕ್ಕೂ ಈ ಥಿಯೇಟರ್‌ಗೂ ಅವಿನಾಭಾವ ಸಂಬoಧವಿತ್ತು. ನಟ ಪುನೀತ್ ರಾಜ್‌ಕುಮಾರ್ ಸಿನಿಮಾಗಳೇ ಹೆಚ್ಚು ಪ್ರದರ್ಶನ ಕಂಡಿದ್ದವು.
ಈ ಚಿತ್ರಮಂದಿರದಲ್ಲಿ ಸಮಯವೂ ಪ್ರೇಕ್ಷಕರಿಗೆ ಪೂರಕವಾಗಿತ್ತು. ಪ್ರದರ್ಶನ ಸಮಯದಲ್ಲಿ ವ್ಯತ್ಯಾಸ ಇತ್ತು. ರಾತ್ರಿ ಶೋ 9.30ಕ್ಕೆ ಇರುತ್ತಿದ್ದರಿಂದ ಪ್ರೇಕ್ಷಕರೂ ಸಹ ಮನೆಯಲ್ಲೇ ಊಟ ಮುಗಿಸಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಅನುಕೂಲವಾಗಿತ್ತು.
ಇತ್ತೀಚೆಗೆ ನಗರದ ಪ್ರತಿಷ್ಠಿತ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟ ಎದುರಿಸಲಾಗದೇ ಮುಚ್ಚುತ್ತಿವೆ. ಈಗ ಆ ಸಾಲಿಗೆ ಸರಸ್ವತಿ ಚಿತ್ರಮಂದಿರವೂ ಸೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss