ಹೊಸದಿಗಂತ ವರದಿ, ಮೈಸೂರು:
ಜಿಲ್ಲೆಯ ಸರಗೂರು ಪಟ್ಟಣ ಪಂಚಾಯತಿಗೆ ಚುನಾವಣೆಯನ್ನು ನಡೆಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮಾರ್ಚ್ 10ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 17 ರಂದು ಕೊನೆಯ ದಿನವಾಗಿದೆ. ಮಾರ್ಚ್ 18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಮಾರ್ಚ್ 20 ಕೊನೆಯ ದಿನವಾಗಿದೆ. ಮತದಾನದ ಅವಶ್ಯಕತೆ ಇದ್ದರೆ ಮತದಾನವನ್ನು ಮಾರ್ಚ್ 29 ರಂದುಬೆಳಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಅವಶ್ಯಕತೆ ಬಿದ್ದರೆ ಮರು ಮತದಾನವನ್ನು ಮಾರ್ಚ್ 30 ರಂದು ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ಮತ ಎಣಿಕೆಯು ಮಾರ್ಚ್ 31ರಂದು ನಡೆಯಲಿದ್ದು, ಮಾರ್ಚ್ 31ರಂದೇ ಚುನಾವಣೆಯು ಮುಕ್ತಾಯವಾಗಲಿದೆ ಎಂದು ಹೇಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿ ನೀಡಿದ್ದು, ಅದರಂತೆ ಕ್ರಮವಹಿಸಲಾಗುವುದು. ಮತದಾರರು ಯಾವುದೇ ಆತಂಕವಿಲ್ಲದೆ ತಮ್ಮ ಮತವನ್ನು ಚಲಾಯಿಸಬಹುದು ಎಂದು ತಿಳಿಸಿದ್ದಾರೆ.