Tuesday, March 28, 2023

Latest Posts

ಸರ್ವೇ ಜನಃ ಸುಖಿನೋ ಭವಂತು ಎಂಬುದು ನನ್ನ ನಿಲುವು: ಎಚ್.ಡಿ.ಕೆ.

ಹೊಸದಿಗಂತ ವರದಿ,ಗೋಕರ್ಣ:

ದಿ. ರಾಮಕೃಷ್ಣ ಹೆಗಡೆ ಅವರನ್ನು ಅಂದು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಎಚ್.ಡಿ. ದೇವೇಗೌಡರು. ಹೀಗಿರುವಾಗ ಅವರ ವಿರುದ್ಧ ನಾವು ಏನು ಮಾಡಿದ್ದೇವೆ ಎಂಬುದನ್ನು ಜನರೇ ನೋಡಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಧ್ಯಾಕ್ಷ ನಳೀನ್ ಕುಮಾರ ಕಟೀಲ್ ಆರೋಪಕ್ಕೆ ಎಚ್.ಡಿ. ಕುಮಾರ ಸ್ವಾಮಿ ಪ್ರತಿಕ್ರಿಯಿಸಿದರು.
ಅವರು ಬುಧವಾರ ಪಂಚರತ್ನ ರಥಯಾತ್ರೆ ಅಂಗವಾಗಿ ಇಲ್ಲಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನಗೆ ಉತ್ತರಿಸಿ ಮಾತನಾಡಿದರು.
ಹಿಂದುತ್ವ , ಧರ್ಮ ರಕ್ಷಣೆಗೆ ನಾವು ಬದ್ಧ. ಆದರೆ ಇದು ಮನೆಯಲ್ಲಿ ನಾವು ಮಾಡೋಣ, ಸಮಾಜದಲ್ಲಿ ಎಲ್ಲರೊಂದಿಗೆ ಬೆರತು ಬಾಳ ಬೇಕು. ಸರ್ವೆ ಜನಃ ಸುಖಿನೋ ಭವಂತು ಎಂಬುದು ನನ್ನ ನಿಲುವು ಎಂದ ಅವರು, ಬ್ರಾಹ್ಮಣರ ಬಗ್ಗೆ ನಾನು ಮಾತನಾಡಿರುವುದನ್ನು ತಪ್ಪಾಗಿ ಬಿಂಬಿಸುತ್ತಿದ್ದು, ನನ್ನ ಹೇಳಿಕೆ ನಂತರ ಅನೇಕ ಜನ ದೂರವಾಣಿ ಮುಖಾಂತರ ಹೇಳಿಕೆ ಸರಿ ಇದೆ ಎಂದಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!