ರಾಷ್ಟ್ರ ರಾಜಧಾನಿಯಲ್ಲಿ ಪೈಶಾಚಿಕ ಕೃತ್ಯ: 12ರ ಬಾಲಕನ ಮೇಲೆ ಅತ್ಯಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ವರ್ಷದ ಬಾಲಕನ ಎಳೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅತ್ಯಾಚಾರದ ಬಳಿಕ ಕೋಲಿನಿಂದ ಬಡಿದು ಮರಾಣಾಂತಿಕ ಹಲ್ಲೆ ಮಾಡಿದ್ದಾರೆ .

12 ಬಾಲಕನ ಟಾರ್ಗೆಟ್ ಮಾಡಿದ ನಾಲ್ವರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ. ತೀವ್ರ ವಿರೋಧ ವ್ಯಕ್ತಪಡಿಸಿದ ಬಾಲಕನ ಕೈ ಕಾಲು ಕಟ್ಟಿ ಹಾಕಲಾಗಿತ್ತು. ತನ್ನನ್ನು ಬಿಟ್ಟು ಬಿಡುವಂತೆ ಬಾಲಕ ಕೇಳಿಕೊಂಡಿದ್ದಾರೆ. ಆದರೆ ಕಾಮುಕರು ಅತ್ಯಾಚಾರ ಎಸಗಿ ಕೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಈ ಕುರಿತು ದೆಹಲಿ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು(FIR) ದಾಖಲಿಸಿಕೊಂಡಿದೆ. ಇಷ್ಟೇ ಅಲ್ಲ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.

ದೆಹಲಿಯಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಬಳಿಕ ದೊಣ್ಣೆಯಿಂದ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ನಮ್ಮ ತಂಡ ದೂರು ದಾಖಲಿಸಿಕೊಂಡಿದೆ ಎಂದು ದೆಹಲಿ ಮಹಿಳಾ ಆಯೋಗದ ಸದಸ್ಯೆ ಸ್ವಾತಿ ಪಾಲಿವಾಲ್ ಹೇಳಿದ್ದಾರೆ.

ದೊಣ್ಣೆಯಿಂದ ಹಲ್ಲೆ ಮಾಡಿ ಬಾಲಕ ಮೃತಪಟ್ಟಿದ್ದಾನೆ ಎಂದು ತೆರಳಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡ ಬಾಲನಕ ನೋವಿನಲ್ಲೇ ನರಳಿದ್ದಾನೆ. ಕೆಲ ಹೊತ್ತಿನ ಬಳಿಕ ಬಾಲಕನ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಸಾವು ಬದುಕಿನ ನಡುವೆ ಬಾಲಕ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!