spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾಕಿಸ್ತಾನ ಗಡಿದಾಟಿದ ನೂರಾರು ಆಫ್ಘನ್ನರು: ಉಪಗ್ರಹದಲ್ಲಿ ಚಿತ್ರ ಸೆರೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡೆದ ನಂತರ ದೇಶ ತೊರೆಯಲು ಅಲ್ಲಿನ ಜನ ಹಾತೊರೆದರು. ಕಾಲ್ನಡಿಗೆಯಲ್ಲೇ ದೇಶ ಬಿಟ್ಟು ಸಮೀಪದ ದೇಶಗಳ ಗಡಿಯ ಬಳಿ ನಡೆದರು. ಗಡಿಗಳನ್ನು ಮುಚ್ಚಿದರೂ ಸಹ ಹಗಲು ರಾತ್ರಿ ಎನ್ನದೆ ಗಡಿ ತೆಗೆಯುವುದನ್ನು ಕಾಯುತ್ತಾ ಕುಳಿತಿದ್ದರು. ಈ ಜನರೆಲ್ಲ ಈಗ ಏನಾಗಿದ್ದಾರೆ?
ಎನ್‌ಡಿಟಿವಿಗೆ ಲಭ್ಯವಾಗಿರುವ ಉಪಗ್ರಹದ ಇಮೇಜ್‌ಗಳಲ್ಲಿ ಆಫ್ಘನ್ ಜನ ಪಾಕಿಸ್ತಾನದ ಗಡಿ ಭಾಗದಲ್ಲಿರುವುದು ಜೊತೆಗೆ ಪಾಕಿಸ್ತಾನದ ಒಳಗೆ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಉಜ್ಬೇಕಿಸ್ತಾನ, ತಜಿಕಿಸ್ತಾನದ ಗಡಿ ಪ್ರದೇಶಗಳಲ್ಲಿ ಆಫ್ಘನ್ ಜನರು ಕಾಣಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸ್ಪಿನ್ ಬೊಲ್ದಾಕ್ ಪ್ರದೇಶದಲ್ಲಿ ಅತಿ ಹೆಚ್ಚು ಚಟುವಟಿಕೆ ಕಾಣುತ್ತಿದೆ. ಜನಸಂಚಾರ ವಿಪರೀತವಾಗಿದ್ದು, ಜನರ ಕೈಯಲ್ಲಿ ವಲಸೆ ಹೋಗಲು ಬೇಕಾದ ವಸ್ತುಗಳು ಕಾಣುತ್ತಿವೆ.
ತಾಲಿಬಾನ್ ಅಫ್ಘಾನ್‌ನನ್ನು ವಶಪಡಿಸಿಕೊಂಡ ನಂತರ ಅಲ್ಲಿನ ನಿವಾಸಿಗಳಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ಜೀವದ ಹಂಗು ತೊರೆದು ಜನ ದೇಶ ಬಿಡುತ್ತಿದ್ದಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss