Saturday, July 2, 2022

Latest Posts

ರಾಮನಗರ ಜಿಲ್ಲೆಯಲ್ಲಿ ಶನಿವಾರ 101 ಮಂದಿಗೆ ಕೊರೋನಾ ಸೋಂಕು ಪ್ರಕರಣ ದೃಢ

ಹೊಸ ದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಇಂದು 101 ಕರೋನ ಸೋಂಕು ದೃಢವಾಗಿದ್ದು, ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ.
ರಾಮನಗರ ತಾಲ್ಲೂಕು-20, ಚನ್ನಪಟ್ಟಣ ತಾಲ್ಲೂಕು-25, ಕನಕಪುರ ತಾಲ್ಲೂಕು-28, ಹಾಗೂ ಮಾಗಡಿ ತಾಲ್ಲೂಕು-28 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ 462 ಕ್ಕೇರಿದೆ, ಜಿಲ್ಲೆಯಲ್ಲಿ ಹಿವರೆಗೆ ಒಟ್ಟು ೮೫೦೩ ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬoದಿದ್ದು, 7961 ಜನರು ಗುಣಮುಖರಾಗಿರುತ್ತಾರೆ.
ಇಂದು ರಾಮನಗರ ತಾಲ್ಲೂಕಿನ-45 ಚನ್ನಪಟ್ಟಣ ತಾಲ್ಲೂಕಿನ-19, ಮಾಗಡಿ ತಾಲ್ಲೂಕಿನ-17, ಮತ್ತು ಕನಕಪುರ ತಾಲ್ಲೂಕಿನ-15 ಜನರು ಗುಣಮುಖರಾಗಿದ್ದಾರೆ. ಮರಣ ಪ್ರಕರಣಗಳ ಸಂಖ್ಯೆ 80 ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss