spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಗ್​ ಬಾಸ್​ ನಲ್ಲಿ ಶನಿವಾರದ ಎಲಿಮಿನೇಷನ್: ಮನೆಯಿಂದ ಹೊರಬಿದ್ದ ಶುಭಾ ಪೂಂಜಾ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದ್ದು, ಅದಕ್ಕೂ ಮೊದಲು ಶನಿವಾರವೇ ಒಂದು ಎಲಿಮಿನೇಷನ್​ ನಡೆದಿದೆ. ಇಂದು ಶುಭಾ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ.
ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದರು. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದರಿಂದ ನಾಮಿನೇಷನ್​ನಿಂದ ಬಚಾವ್​ ಆಗಿದ್ದರು. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದರು.
ಬಿಗ್​ ಬಾಸ್​ ಫಿನಾಲೆ ವಾರದಲ್ಲಿ ಐವರು ಉಳಿದುಕೊಳ್ಳುತ್ತಾರೆ. ಅಂದರೆ, ಫಿನಾಲೆ ಬರುವುದರೊಳಗೆ ಬಿಗ್​ ಬಾಸ್​ ಮನೆಯಿಂದ ಮೂವರು ಎಲಿಮಿನೇಷನ್​ ಆಗಲಿದ್ದಾರೆ. ಆ ಮೂವರು ಸ್ಪರ್ಧಿಗಳು ಯಾರು ಅನ್ನೋದು ಸದ್ಯದ ಕುತೂಹಲವಾಗಿತ್ತು. ಅದರಲ್ಲಿ ಈಗ ಒಬ್ಬರು ಶುಭಾ ಆಗಿದ್ದಾರೆ.
ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ನಲ್ಲಿ ಅಷ್ಟಾಗಿ ಆಯಕ್ಟಿವ್​ ಆಗಿರಲಿಲ್ಲ. ಇನ್ನು, ಉಳಿದ ಕಂಟೆಸ್ಟೆಂಟ್​ಗಳಿಗೆ ಹೋಲಿಸಿದರೆ, ಶುಭಾ ವೀಕ್​ ಆಗಿದ್ದರು. ಈ ಕಾರಣಕ್ಕೆ ಅವರು ಎಲಿಮಿನೇಟ್​ ಆಗಿದ್ದಾರೆ. ಅವರು ಚಿಕ್ಕಮಕ್ಕಳಂತೆ ಆಡೋದು ಕಿರಿಕಿರಿ ತರುತ್ತಿದೆ ಎಂದು ಕೆಲವರು ಹೇಳಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss