Monday, October 3, 2022

Latest Posts

ನೇತಾಜಿ ಸಹವರ್ತಿ ಸತ್ಯ ಗುಪ್ತಾ ತನ್ನ ಬಹುಪಾಲು ಜೀವಿತವನ್ನು ರಾಜಕೀಯ ಖೈದಿಯಾಗಿ ಜೈಲಲ್ಲಿ ಕಳೆದ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪರಿಮೋಹನ್ ಗುಪ್ತಾ ಅವರ ಮಗ ಸತ್ಯ ಗುಪ್ತಾ (1902-1966) ಢಾಕಾದ ಬೆಂಜಗಾಂವ್‌ನಲ್ಲಿ ಜನಿಸಿದರು. 1919 ರಲ್ಲಿ ಅವರು ಢಾಕಾ ಕಾಲೇಜಿಯೇಟ್ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಇಂಟರ್ಮೀಡಿಯೇಟ್ ಆರ್ಟ್ಸ್ ತರಗತಿಗೆ ಪ್ರವೇಶ ಪಡೆದರು. ಆದರೆ ಅಷ್ಟರಲ್ಲಾಗಲೇ ಸ್ವಾತಂತ್ರ್ಯ ಚಳುವಳಿ ಅವರನ್ನು ಕೈಬೀಸಿ ಕರೆದಿತ್ತು. ಕ್ರಾಂತಿಕಾರಿ ಹೋರಾಟಗಾರ  ಅಶ್ವಿನಿಕುಮಾರ್ ದತ್ತಾ ಅವರ ಸಲಹೆಯ ಮೇರೆಗೆ ಸತ್ಯ ಗುಪ್ತಾ 1921ರಲ್ಲಿ ನಡೆದಿದ್ದ ಅಂತಿಮ ಪರೀಕ್ಷೆಗೆ ಹಾಜರಾಗಲಿಲ್ಲ. ಐದು ವರ್ಷಗಳ ನಂತರ ಅವರು ಢಾಕಾ ವಿಶ್ವವಿದ್ಯಾಲಯದಲ್ಲಿ ಎಂಎ ಪರೀಕ್ಷೆ ಬರೆದು ಉತ್ತೀರ್ಣರಾದರು.
ಅವರು ಸ್ವತಂತ್ರ್ಯ ಹೋರಾಟ ಸಂಘಟನೆಯಾದ ಢಾಕಾದ ಮುಕ್ತಿ ಸಂಘದೊಂದಿಗೆ ಸಂಬಂಧವನ್ನು ಹೊಂದಿದ್ದರು. 1927 ರಲ್ಲಿ ಕಲ್ಕತ್ತಾಗೆ ಬಂದಮ ಮೇಲೆ ಸುಭಾಷ್ ಚಂದ್ರ ಮತ್ತು ಶರತ್ ಚಂದ್ರ ಬೋಸ್ ಅವರನ್ನು ಭೇಟಿಯಾದರು. ಮರು ವರ್ಷ ನಡೆದ ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ, ಸುಭಾಸ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಸ್ವಯಂಸೇವಕರ ಪ್ರತಿನಿಧಿಯಾಗಿ ನೇಮಕಗೊಂಡರು. ಆ ಸಂದರ್ಭದಲ್ಲಿ ಅವರು ಬಂಗಾಳದ ನಾಲ್ಕು ಪ್ರಮುಖ ರಹಸ್ಯ ಸಂಘಗಳ ಏಕೀಕೃತ ಸಂಸ್ಥೆಯಾದ ರಿವೋಲ್ಟಿಂಗ್ ಗ್ರೂಪ್‌ನ ಮೊದಲ ಸಭೆಯಲ್ಲಿ ಢಾಕಾ ಗುಂಪನ್ನು ಪ್ರತಿನಿಧಿಸಿದರು. ಗುಂಪು ಸ್ವಾತಂತ್ರ್ಯಕ್ಕಾಗಿ ತಮ್ಮೆಲ್ಲಾ ಸಂಪನ್ಮೂಲಗಳನ್ನು ಒಗ್ಗೂಡಿಸಿ ಒಟ್ಟಾಗಿ ಕೆಲಸ ಮಾಡಲು ನಿರ್ಣಯಿಸಿತು. ಢಾಕಾ, ಚಟ್ಟಗ್ರಾಮ್, ಬಾರಿಸಾಲ್, ಮೈಮೆನ್‌ಸಿಂಗ್ ಮತ್ತು ಕಲ್ಕತ್ತಾದ ಬ್ರಿಟೀಷ್ ಶಸ್ತ್ರಾಗಾರಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ಯೋಜಿಸಲಾಯಿತು. ಆದರೆ ಕಾರಣಾಂತರಗಳಿಂದ ಅವರ ಯೋಜನೆ ಫಲಿಸದೇ ಮುಖಂಡರನ್ನು ಬಂಧಿಸಲಾಯಿತು.
1930 ರಲ್ಲಿ ಬಂಧಿತರಾದ ಸತ್ಯ ಗುಪ್ತಾ ಅವರನ್ನು 1931 ರಿಂದ 1938 ರವರೆಗೆ ಬ್ರಿಟಿಷ್ ಭಾರತದ ವಿವಿಧ ಜೈಲುಗಳಲ್ಲಿ ರಾಜಕೀಯ ಕೈದಿಯಾಗಿ ಬಂಧಿಸಿಡಲಾಗಿತ್ತು. 1938 ರಲ್ಲಿ ಬಿಡುಗಡೆಯಾದ ನಂತರ ಅವರು ನೇತಾಜಿಯ ಸಹಾಯಕರಾಗಿ ಕೆಲಸ ಮಾಡಿದರು. ಆದರೆ ನೇತಾಜಿ ಆದರೆ ಕಲ್ಕತ್ತಾದಿಂದ ತಪ್ಪಿಸಿಕೊಂಡ ನಂತರ, ಸತ್ಯಾಗುಪ್ತರನ್ನು 1941 ರಿಂದ 1946 ರವರೆಗೆ ರಾಜಕೀಯ ಖೈದಿಯಾಗಿ ಮತ್ತೆ ಬಂಧನಕ್ಕೊಳಪಡಿಸಲಾಗಿತ್ತು. ಸತ್ಯ ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಉಳಿದ ಜೀವನವನ್ನು ಪಶ್ಚಿಮ ಬಂಗಾಳದ ಬದು ಗ್ರಾಮದಲ್ಲಿ ನಿರಾಶ್ರಿತರ ಕಲ್ಯಾಣ ಕಾರ್ಯ ನರವೇರಿಸುತ್ತ ಕಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!