ಬಸವಕಲ್ಯಾಣ ಸಮಾವೇಶಕ್ಕೆ ಅನುಮತಿ ಸಿಗದಿದ್ದರೆ ದೆಹಲಿಯಲ್ಲಿ ಸತ್ಯಾಗ್ರಹ: ಗುರುನಾಥ ವಡ್ಡೆ ಎಚ್ಚರಿಕೆ

ಹೊಸದಿಗಂತ ವರದಿ ಬೀದರ್: ಬಸವಕಲ್ಯಾಣದಲ್ಲಿ ಜೂನ್ 28 ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಅನುಮತಿ ನೀಡದಿದ್ದಲ್ಲಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಖಂಡಿಸಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸುವುದಾಗಿ ಸಮಾಜಸೇವಕ ಗುರುನಾಥ ವಡ್ಡೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಬಸವಕಲ್ಯಾಣ ತಾಲೂಕು ಆಡಳಿತವು ಸಮಾವೇಶಕ್ಕೆ ಅನುಮತಿ ನಿರಾಕರಿಸಿರುವುದು ಭಾರತೀಯ ಸಂವಿಧಾನದ ಅನುಚ್ಛೇದ 19(1)(ಎ), 19(1)(ಬಿ) ಹಾಗೂ 25(1)ರಲ್ಲಿ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಸಮಾವೇಶಕ್ಕೆ … Continue reading ಬಸವಕಲ್ಯಾಣ ಸಮಾವೇಶಕ್ಕೆ ಅನುಮತಿ ಸಿಗದಿದ್ದರೆ ದೆಹಲಿಯಲ್ಲಿ ಸತ್ಯಾಗ್ರಹ: ಗುರುನಾಥ ವಡ್ಡೆ ಎಚ್ಚರಿಕೆ