Saturday, August 13, 2022

Latest Posts

ಕಸ ವಿಲೇವಾರಿ ಘಟಕಕ್ಕೆ ವಿರೋಧ: ಬ್ಯಾಡಗೊಟ್ಟ ಗ್ರಾಮಸ್ಥರ ಪ್ರತಿಭಟನೆ

ಹೊಸದಿಗಂತ ವರದಿ, ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಆರಂಭಿಸಲುದ್ದೇಶಿಸಿರುವ ಕಸ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುವುದರೊಂದಿಗೆ ಪ್ರತಿಭಟನೆ ನಡೆಸಿದರು.

ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಬಳಿಯಲ್ಲೇ ಕಸ ವಿಲೇವಾರಿ ಘಟಕ ಆರಂಭಿಸಲು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತ್ ಗಳು ಮುಂದಾಗಿದ್ದವು. ಕಳೆದ ಮೂರು ವರ್ಷಗಳಿಂದ ಈ ಪ್ರಯತ್ನ ಮುಂದುವರಿದಿತ್ತಾದರೂ ಕೆಲವು ಕಾರಣಗಳಿಂದಾಗಿ ಕೆಲ ಕಾಲ ಕೆಲಸ ಸ್ಥಗಿತಗೊಂಡಿತ್ತು.

ಆದರೆ ಸರಕಾರದ ನಿಯಮನುಸಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕವನ್ನು ಆರಂಭಿಸಿ ಅದರ ಮೂಲಕ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಲು ನೂತನ ತಂತ್ರಜ್ಞಾನ ಬಳಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಬ್ಯಾಡಗೊಟ್ಟ ಗ್ರಾಮಸ್ಥರು ಭಾನುವಾರ ಸಂಜೆ 6 ಗಂಟೆಗೆ ತುರ್ತು ಸಭೆ ನೆಡೆಸಿ ನಂತರ ಗ್ರಾಮದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪುನರ್ವಸತಿ ಕೇಂದ್ರ ಹಾಗೂ ಬ್ಯಾಡಗೊಟ್ಟ ಗ್ರಾಮದ 350ಕ್ಕೂ ಅಧಿಕ ಕುಟುಂಬದ ಸದಸ್ಯರು ಮತ್ತು ಪ್ರಮುಖರಾದ ವೈ.ಸಿ.ಮುತ್ತ, ಅಪ್ಪು, ಮೀಸೆ ಮುತ್ತ, ಕುಮಾರ್, ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss