ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಹೌಸ್ ವೈಫ್’ಗೆ ಆಗಾಗ ಈ ಮಾತುಗಳನ್ನು ಹೇಳ್ತಿರಿ… ಪ್ರೀತಿ ದುಪ್ಪಟ್ಟಾಗೋದು ಗ್ಯಾರೆಂಟಿ!

ಆಚೆ ಕೆಲಸಕ್ಕೆ ಹೋಗದೆ, ಮನೆಯಲ್ಲೇ ಇರುವ ಪತ್ನಿಯರಿಗೆ ಬಹಳ ಬೇಗ ಲೈಫ್ ಬೋರ್ ಆಗಿಬಿಡುತ್ತದೆ. ಅದೇ ಅಡುಗೆ ಮನೆ, ಅದೇ ಕೆಲಸ, ಮಕ್ಕಳು, ತಿಂಡಿ, ಊಟ ಎಲ್ಲ ಅದೇ. ಹೊಸತೇನು ಇರುವುದಿಲ್ಲ. ಗಂಡನ ಪ್ರೀತಿಯ ನಡುವಳಿಕೆ ಮಾತ್ರ ಹೌಸ್ ವೈಫ್’ಗೆ ಹೊಸ ಜೀವಂತಿಕೆ. ಆದರೆ ಇಲ್ಲಿ ಪತಿ ಮದುವೆಯ ಹೊಸತರಲ್ಲಿ ತೋರಿಸುತ್ತಿದ್ದ ಪ್ರೀತಿಯನ್ನು ವರ್ಷ ಕಳೆದಂತೆ ಮರೆತುಬಿಡುತ್ತನಾ. ಆಗಲೇ ಹೌಸ್ ವೈಫ್ ಜೀವನ ಸಾಕಪ್ಪ ಎನಿಸುವುದು. ಇನ್ಮುಂದೆ ಈ ತಪ್ಪು ಮಾಡಬೇಡಿ. ನಿಮ್ಮ ಹೌಸ್ ವೈಫ್’ಗೆ ಆಗಾಗ ಈ ಮಾತುಗಳನ್ನು ಹೇಳಿದ್ರೆ ಪ್ರೀತಿ ದುಪ್ಪಟ್ಟಾಗೋದು ಗ್ಯಾರೆಂಟಿ… ಯಾವೆಲ್ಲ ಮಾತು ಇಲ್ಲಿದೆ ನೋಡಿ..

  • ನಿನ್ನ ಕೈನಲ್ಲಿ ನಳ ಮಹಾರಾಜನೇ ಇರಬಹುದು ಕಣೇ.. ಎಂಥಾ ರುಚಿಯಾಗಿ ಅಡುಗೆ ಮಾಡ್ತೀಯಲ್ಲ.
  • ನೀನೆಷ್ಟು ಒಳ್ಳೆಯವಳು.. ಮದುವೆ ಶುರುವಿನಲ್ಲಿ ತೋರಿಸುತ್ತಿದ್ದ ಪ್ರೀತಿಯಲ್ಲಿ ಒಂದಿಂಚು ಕಡಿಮೆ ಆಗಿಲ್ಲ.
  • ಸೀರಿಯಸ್ಲಿ ನೀನು ನನ್ನ ಲೈಫ್ ಲ್ಲಿ ಬರ್ದೆ ಇದ್ದಿದ್ರೆ ನಾನೇನಾಗ್ತಿದ್ನೊ..!
  • ಮಕ್ಕಳು, ಮನೆ, ಕರೆಂಟ್ ಬಿಲ್, ಫೋನ್ ಬಿಲ್, ವಾಟರ್ ಬಿಲ್ಲ ಅಂಥ ಪ್ರತಿಯೊಂದು ನೋಡ್ಕೋತಿಯಲ್ಲ.. ಯೂ ಆರ್ ರಿಯಲೀ ಗ್ರೇಟ್..!
  • ಆಫೀಸ್ ನಲ್ಲಿ ನಿನ್ನನ್ನ ತುಂಬಾ ನೆನಪು ಮಾಡ್ಕೋತಿನಿ. ಕೆಲವೊಂದ ಸಲ ನಿನ್ನ ಯಾವಾಗ ನೋಡ್ತೀನೋ ಅನಸತ್ತೆ!
  • ಮನೆಗೆ ಬಂದ ತಕ್ಷಣ ನಿನ್ನ ಈ ಮುದ್ದು ಮುಖ ನೋಡಿದ ಕೂಡಲೇ ಆಯಾಸ ಎಲ್ಲ ಮರೆತು ಹೋಗತ್ತೆ.
  • ನೀನು ಬೈಲಿ ಅಂತಾನೇ ನಾನು ಒದ್ದೆ ಟವೆಲ್ ಬೆಡ್ ಮೇಲೆ ಹಾಕೋದು.. ನೀನು ಬೈಯೋದು ನಂಗಿಷ್ಟ.
  • ಮಕ್ಕಳಿಗೆ ಹೋಮ್ ವರ್ಕ್ ಒಂದು ದಿನಾನು ನಾನು ಮಾಡಸಿಲ್ಲ. ಪ್ರತಿ ದಿನ ನೀನೇ ಮಾಡಸ್ತಿಯಲ್ಲ. ನಿಂಗೆ ಬೋರ್ ಬರಲ್ವ.
  • ನಮ್ಮ ವೆಡ್ಡಿಂಗ್ ಆ್ಯನಿವರ್ಸರಿ ಗೆ ಆಚೆ ಹೋಗೋಕೆ ಆಗಿಲ್ಲ. ಈ ತಿಂಗಳ ಕೊನೆಯಲ್ಲಿ ಎಲ್ಲಾದ್ರೂ ಟ್ರಿಪ್ ಹೋಗೋಣ.
  •  ನಿಮ್ಮ ಅಪ್ಪ-ಅಮ್ಮನಿಗೆ ನಾನು ಯಾವತ್ತು ರುಣಿ. ಎಷ್ಟೊಳ್ಳೆ ಮಗಳನ್ನ ಹೆತ್ತಿದ್ದಾರೆ.
  • ನೀನು ಸಿಹಿ ನೀರಿನ ಕೊಳ ಕಣೆ. ಎಷ್ಟು ಬೊಗಸೆ ತುಂಬಿಕೊಂಡರು ಖಾಲಿ ಆಗೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss