Thursday, August 11, 2022

Latest Posts

ಎಸ್‌ಬಿಐ ಗ್ರಾಹಕರ ಮೇಲೆ ಚೀನಾ ಹ್ಯಾಕರ್ ಕಣ್ಣು: ಎಚ್ಚರ ತಪ್ಪಿದ್ರೆ ಖಾತೆ ಹಣ ಖಲ್ಲಾಸ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಗ್ರಾಹಕರೇ, ಎಚ್ಚರಾ ಎಚ್ಚರಾ…
ಎಚ್ಚರ ತಪ್ಪಿದರೆ ಒಂದು ಎಸ್ಸೆಮ್ಮೆಸ್ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಅಷ್ಟೂ ಹಣವನ್ನು ಕ್ಷಣದಲ್ಲಿ ಗಾಯಬ್ ಮಾಡಿಬಿಡಬಹುದು!
ಹೌದು, ಈಗ ಖುದ್ದು ಎಸ್‌ಬಿಐಯೇ ತನ್ನ ಗ್ರಾಹಕರಿಗೆ ಜಾಗರೂಕರಾಗಿರಿ ಎಂಬ ಎಚ್ಚರಿಕೆಯ ಸಂದೇಶ ನೀಡಿದೆ. ಚೀನಾ ಮೂಲದ ಹ್ಯಾಕರ್‌ಗಳು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಮೇಲೆ ಕಣ್ಣಿಟ್ಟಿದ್ದು, ವಿಶೇಷ ವೆಬ್‌ಸೈಟ್ ಲಿಂಕ್ ಬಳಸಿ ಗ್ರಾಹಕರಲ್ಲಿ ತಮ್ಮ ಕೆವೈಸಿಯನ್ನು ನವೀಕರಿಸಲು ಕೇಳುತ್ತಿರುವ ಪ್ರಕರಣಗಳು ಈಗ ವರದಿಯಾಗುತ್ತಿವೆ.
ಹೇಗೆ ವಂಚನೆ?
ಮೊದಲಿಗೆ ವಾಟ್ಸಾಪ್ ಮತ್ತು ಎಸ್‌ಎಂಎಸ್ ಮೂಲಕ ಗ್ರಾಹಕರನ್ನು ತಲುಪುವ ಹ್ಯಾಕರ್‌ಗಳು, ಅವರಲ್ಲಿ ಕೆವೈಸಿಯನ್ನು ನವೀಕರಿಸಲು ಕೇಳಿಕೊಳ್ಳುತ್ತಿದ್ದಾರೆ. ಎಸ್ಸೆಮ್ಮೆಸ್ ಜೊತೆಗೆ ವೆಬ್‌ಸೈಟೊಂದರ ಲಿಂಕ್ ಕೂಡಾ ಕಳುಹಿಸಲಾಗುತ್ತದೆ. ವಂಚನೆ ಬಗ್ಗೆ ತಿಳಯದವರು, ಅಲ್ಲಿರುವ ವೆಬ್‌ಸೈಟ್ ಗುಂಡಿ ಒತ್ತಿದಾಕ್ಷಣ ಬಳಕೆದಾರರನ್ನು ಎಸ್‌ಬಿಐನ ನಕಲಿ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ಇಲ್ಲಿ ನೀಡಲಾಗಿರುವ ಲಾಗಿನ್ ಮುಂದುವರಿಸಿ ಬಟನ್ ಒತ್ತಿದಾಗ, ಬಳಕೆದಾರರನ್ನು ಮತ್ತೊಂದು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ಕ್ಯಾಪ್ಚಾ ಕೋಡ್ ಜೊತೆಗೆ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಅನ್ನು ನಮೂದಿಸಲು ಕೇಳಲಾಗುತ್ತದೆ. ಈ ಮಾಹಿತಿಯನ್ನು ನಮೂದಿಸಿದ ತಕ್ಷಣ, ಅದು ನೇರವಾಗಿ ಹ್ಯಾಕರ್‌ಗಳಿಗೆ ತಲುಪುತ್ತದೆ. ಅದರ ನಂತರ ಹ್ಯಾಕರ್‌ಗಳ ಕರಾವತ್ತು ಆರಂಭವಾಗುತ್ತದೆ. ಕ್ಷಣಾರ್ಧದಲ್ಲಿ ಖಾತೆ ಖಾಲಿಯಾಗಿರುತ್ತದೆ. ಆದ್ದರಿಂದ ಬ್ಯಾಂಕ್ ಸಂಬಂಧಿತ ಯಾವುದೇ ಸಂದೇಶಗಳು ಬಂದರೂ ಮುಂದುವರಿಯುವ ಮುನ್ನ ಸಂಬಂಧಪಟ್ಟ ಬ್ಯಾಂಕ್‌ಗಳನ್ನು ಸಂಪರ್ಕಿಸುವುದು ಸುರಕ್ಷಿತ.
ಎಲ್ಲವೂ ಚೀನಾದ್ದೇ!
ಕೆಲ ಸಂದೇಶಗಳಲ್ಲಿ ಎಸ್‌ಬಿಐ ನಿಮಗೆ 50 ಲಕ್ಷ ರೂ.ಗಳ ಉಡುಗೊರೆ ನೀಡುತ್ತಿದೆ ಎಂಬ ಆಮಿಷವನ್ನು ಒಡ್ಡಲಾಗುತ್ತಿದೆ. ಇಂತಹ ಹಗರಣಗಳನ್ನು ತಪ್ಪಿಸಲು ಜನರಿಗೆ ಸೂಚಿಸಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ರಾಜಧಾನಿ ದೆಹಲಿ ಮೂಲದ ಸೈಬರ್ ಪೀಸ್ ಫೌಂಡೇಶನ್ ಮತ್ತು ಆಟೊಬೊಟ್ ಇನೋಸೆಕ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ಅಧ್ಯಯನ ಮಾಡಿದೆ. ತನಿಖೆಗಳ ಪ್ರಕಾರ ಗ್ರಾಹಕರಿಗೆ ಲಿಂಕ್ ನೀಡಲಾದ ವೆಬ್‌ಸೈಟ್, ಎಲ್ಲಾ ಡೊಮೇನ್ ಹೆಸರುಗಳ ನೋಂದಣಿ ದೇಶ ಚೀನಾ ಆಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss