ಮೊಬೈಲ್‌ ಫಂಡ್‌ ವರ್ಗಾವಣೆ ಮೇಲಿನ SMS ಶುಲ್ಕಗಳನ್ನು ಮನ್ನಾ ಮಾಡಿದ ಎಸ್‌ಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI), ಮೊಬೈಲ್ ಫಂಡ್ ವರ್ಗಾವಣೆಯ ಮೇಲಿನ SMS ಶುಲ್ಕವನ್ನು ಮನ್ನಾ ಮಾಡಿದೆ ಎಂದು ಹೇಳಿದೆ. ಇನ್ನು ಮುಂದೆ USSD (ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ) ಸೇವೆಗಳನ್ನು ಬಳಸಿಕೊಂಡು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ಅನುಕೂಲಕರವಾಗಿ ವಹಿವಾಟು ನಡೆಸಬಹುದಾಗಿದೆ. ಇಲ್ಲಿಯವರೆಗೂ ಇವುಗಳ ಮೇಲೆ ಎಸ್ಸೆಂಎಸ್‌ ಶುಲ್ಕಗಳನ್ನು ವಿಧಿಸಲಾಗುತ್ತಿತ್ತು.

“ಮೊಬೈಲ್ ಫಂಡ್ ವರ್ಗಾವಣೆಯಲ್ಲಿ SMS ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ! ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನುಕೂಲಕರವಾಗಿ ವ್ಯವಹಾರ ಮಾಡಬಹುದು… ವಿಶೇಷವಾಗಿ ಫೀಚರ್ ಫೋನ್ ಬಳಕೆದಾರರು ಕೇವಲ *99# ಅನ್ನು ಡಯಲ್ ಮಾಡಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಿ”ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದೆ.

ಇದರಿಂದ ಹಣವನ್ನು ಕಳುಹಿಸುವುದು, ಹಣವನ್ನು ವಿನಂತಿಸುವುದು, ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು, ಮಿನಿ ಸ್ಟೇಟ್‌ಮೆಂಟ್ ಪಡೆಯುವುದು ಮತ್ತು UPI ಪಿನ್ ಬದಲಾವಣೆಯಂತಹ ಸೇವೆಗಳನ್ನು SMS ಶುಲ್ಕವಿಲ್ಲದೇ ಪಡೆಯಬಹುದಾಗಿದೆ. “ಬಳಕೆದಾರರು ಈಗ USSD ಸೇವೆಗಳನ್ನು ಬಳಸಿಕೊಂಡು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನುಕೂಲಕರವಾಗಿ ವಹಿವಾಟು ಮಾಡಬಹುದು” ಎಂದು SBI ಹೇಳಿದೆ.

ಯುಎಸ್‌ಎಸ್‌ಡಿ ತಂತ್ರಜ್ಞಾನ ವೇದಿಕೆಯಾಗಿದ್ದು, ಇದರ ಮೂಲಕ ಮೂಲ ಫೋನ್‌ನಲ್ಲಿ ಜಿಎಸ್‌ಎಂ ನೆಟ್‌ವರ್ಕ್ ಮೂಲಕ ಮಾಹಿತಿಯನ್ನು ರವಾನಿಸಬಹುದು. ಇದು ಎಲ್ಲಾ `ಮೊಬೈಲ್ ಫೋನ್‌ಗಳಲ್ಲಿ SMS ಸೌಲಭ್ಯದೊಂದಿಗೆ ಲಭ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!