Saturday, July 2, 2022

Latest Posts

ಎಸ್ ಸಿ ಎಸ್ಟಿಗೆ ಹೆಚ್ಚಿನ ರಕ್ಷಣೆ ನೀಡಿದರೆ ಸಿದ್ದರಾಮಯ್ಯನವರಿಗೇಕೆ ಕಷ್ಟ?- ಬೊಮ್ಮಾಯಿ ಪ್ರಶ್ನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕವನ್ನು ವಿರೋಧಿಸುತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಗುರುವಾರ ಸದನದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳಲ್ಲಿ ಶಿಕ್ಷೆಯ ಪ್ರಮಾಣವೂ ಒಂದು.

ಅವರು ಹೇಳಿದ್ದು- “ಅಂಬೇಡ್ಕರ್ ಅವರ ಸಂವಿಧಾನ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಕಾಯ್ದೆಯ ಸಮಾನ ರಕ್ಷಣೆ ಇರುತ್ತದೆ ಎಂದು ಹೇಳಿದೆ. ಈ ಆಶಯಕ್ಕೆ ವಿಧೇಯಕ ವಿರುದ್ಧವಾಗಿದೆ. ಏಕೆಂದರೆ, ಮಹಿಳೆಯರು, ಬುದ್ಧಿಮಾಂದ್ಯರು, ಎಸ್ ಸಿ ಮತ್ತು ಎಸ್ಟಿ ಜನಾಂಗದವರು ಬಲವಂತದ ಮತಾಂತರಕ್ಕೆ ಒಳಗಾದರೆ ಮತಾಂತರ ಮಾಡಿದವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ. ಇದಕ್ಕೆ ಸಂವಿಧಾನದ ಆಧಾರವಿಲ್ಲ.”

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು- “ನಾವು ಎಸ್ ಸಿ -ಎಸ್ಟಿ ಸಮುದಾಯದವರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಹೋದರೆ ಸಿದ್ದರಾಮಯ್ಯನವರಿಗೆ ಖುಷಿಯಾಗಬೇಕಿತ್ತು. ಅದರ ಬದಲು ಆಕ್ಷೇಪವೇಕೆ? ಎಲ್ಲರೂ ಸಮಾನರು ಎಂಬ ಸ್ಥಿತಿ ಇನ್ನೂ ಬಂದಿಲ್ಲ. ಅದೊಂದು ಆಶಯ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳಿವೆ. ಎಸ್ ಸಿ- ಎಸ್ಟಿ, ಮಹಿಳೆ ಇವರಿಗೆಲ್ಲ ಸಮಾನ ಶಿಕ್ಷಣ ಇನ್ನೂ ಆಗಿಲ್ಲ. ಹೀಗಿರುವಾಗ, ಅವರ ಈ ದೌರ್ಬಲ್ಯ ಉಪಯೋಗಿಸಿಕೊಂಡು ಮತಾಂತರ ಮಾಡುವವರಿಗೆ ಶಿಕ್ಷೆ ನೀಡಿದರೆ ನಿಮ್ಮಿಂದ ಆಕ್ಷೇಪವೇಕೆ ಬರಬೇಕು?”

ಆದರೂ ಸಿದ್ದರಾಮಯ್ಯನವರು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತಮ್ಮ ವಾದ ಮುಂದುವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss