spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿದ್ವಾಂಸ ಕೆ. ಎಸ್. ನಾರಾಯಣಾಚಾರ್ಯ ಇನ್ನಿಲ್ಲ

- Advertisement -Nitte

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಿದ್ವಾಂಸ, ಲೇಖಕ, ವಾಗ್ಮಿ ಕೆ. ಎಸ್. ನಾರಾಯಣಾಚಾರ್ಯ (88) ಇನ್ನಿಲ್ಲ.

ದೇಶದ ಭವ್ಯ ಪರಂಪರೆಯನ್ನು ತಮ್ಮ ಕೃತಿಗಳು ಹಾಗೂ ಮಾತುಗಳಲ್ಲಿ ಹಿಡಿದಿಟ್ಟವರು, ಅದನ್ನು ಜನಮಾನಸಕ್ಕೆ ದಾಟಿಸುತ್ತ ಬಂದಿದ್ದವರು ನಾರಾಯಣಾಚಾರ್ಯರು.

ಆಂಗ್ಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಾಕ್ಟರೇಟ್ ಮಾಡಿದ್ದ ನಾರಾಯಣಾಚಾರ್ಯರು ಇನ್ನೊಂದೆಡೆ ವೇದಾಧ್ಯಯನದಲ್ಲೂ, ವಿಶೇಷವಾಗಿ ಕೃಷ್ಣ ಯಜುರ್ವೇದದಲ್ಲಿ ಪಾರಂಗತರಾಗಿದ್ದರು.

ವೇದ ಸಂಸ್ಕೃತಿಯ ಪರಿಚಯ, ರಾಮಾಯಣ ಪಾತ್ರ ಪ್ರಪಂಚ, ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಮಹಾಭಾರತ ಕಾಲನಿರ್ಣಯ ಹೀಗೆ ಅವರ ಕೃತಿಗಳ ಹೆಸರೇ ಅವರು ಬಿಟ್ಟುಹೋಗಿರುವ ಮಹಾಸಂಪತ್ತಿನ ಪರಿಚಯವನ್ನು ಕೊಡುವಂಥದ್ದಾಗಿದೆ.

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಅವರ ಅಂಕಣ ಬರಹಗಳು ಮತ್ತು ಕಾದಂಬರಿಗಳು ಪ್ರಕಟಗೊಂಡು ಜನಮನ ಗೆದ್ದಿದ್ದವು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss