Sunday, April 11, 2021

Latest Posts

ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ: ಬಸ್ ಬಾಗಿಲಲ್ಲೇ ವಿದ್ಯಾರ್ಥಿಗಳ “ಸಾಹಸಯಾತ್ರೆ”

ದಿಗಂತ ವರದಿ, ಬೆಳ್ತಂಗಡಿ

ಚಿತ್ರದಲ್ಲಿನ ದೃಶ್ಯವನ್ನು ನೋಡಿದರೆ ಇದು ರಾಜ್ಯದ ಉತ್ತರ ಭಾಗದ ಘಟನೆಯಾಗಿರಬಹುದು ಎಂದು ಓದುಗರು ಅಂದಾಜಿಸಬಹುದು. ಉತ್ತರ ಕರ್ನಾಟಕದಾಚೆ ಬಸ್ಸಿನ ಟಾಪಿನ ಮೇಲೆ ಕೂತು, ಹಿಂದಿನ ಏಣಿಯನ್ನು ಹಿಡಿದು ನೇತಾಡಿಕೊಂಡು, ವಾಹನದ ಬಾಗಿಲಿನಲ್ಲಿ ನಿಂತುಕೊಂಡು ಹೋಗುವುದು ಸಾಮಾನ್ಯ.

ಆದರೆ ಈ ದೃಶ್ಯ ಅಲ್ಲಿನದು ಅಲ್ಲ. ಇದು ಬೆಳ್ತಂಗಡಿ ತಾಲೂಕಿನ ವೇಣೂರು ರಾಜ್ಯ ಹೆದ್ದಾರಿಯಲ್ಲಿ ಕಂಡು ಬಂದ ದೃಶ್ಯ.  ಬೆಳ್ತಂಗಡಿ- ಗುರುವಾಯನಕೆರೆಯಾಗಿ ವೇಣೂರು, ಮೂಡು ಬಿದರೆಯನ್ನು ಸಂಪರ್ಕಿಸಲು ಖಾಸಗಿ ವಾಹನಗಳೇ ಇರುವುದು. ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ಪ್ರಯಾಣಿಸುಸುತ್ತಾರೆ.

ಸಂಜೆ ವೇಳೆ ವಾಪಸು ಮನೆಗೆ ತೆರಳಲು ಒಂದೇ ಬಸ್ಸನ್ನು ಅವಲಂಬಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ಹೇಗಾದರೂ ಮಾಡಿ, ತಮ್ಮ ಜೀವವನ್ನು ಅಪಾಯಕೊಡ್ಡಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಕೆಲ ವರ್ಷಗಳ ಹಿಂದೆ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೆಳ್ತಂಗಡಿ ಬಸ್ಸಿನ ಟಾಪಿನಲ್ಲಿ ಕೂತು ಪ್ರಯಾಣಿಸಿದ್ದು ಚರ್ಚೆಗೆ ಕಾರಣ ವಾಗಿತ್ತು. ಈಗ ಮಂಗಳವಾರ ವೇಣೂರಿನಲ್ಲಿ ಈ ಪರಿಯ ಅಪಾಯಕಾರಿ ದೃಶ್ಯ ಕಂಡು ಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss